ಉಡುಪಿ: ಆಸ್ತಿ ತೆರಿಗೆ ರಿಯಾಯತಿ ವಿಸ್ತರಣೆ
ಉಡುಪಿ, ಮೇ 11: 2021-22ನೇ ಸಾಲಿನ ಎಪ್ರಿಲ್ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ 2ನೇ ಅಲೆಯು ಅತೀ ತೀವ್ರವಾಗಿ ಹರಡುತ್ತಿರು ವುದರಿಂದ, ಸಾರ್ವಜನಿಕರು ಸುರಕ್ಷಿತಾ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನ ಹರಿಸಬೇಕಾಗಿರುವುದರಿಂದ ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ಉಡುಪಿ ನಗರಸಭೆಯ 2021-22ನೇ ಸಾಲಿನ ಆರ್ಥಿಕ ವರ್ಷದ ಎಪ್ರಿಲ್ ತಿಂಗಳಲ್ಲಿ ಆಸ್ತಿತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ.5ರ ರಿಯಾಯಿತಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.
ಪ್ರಸ್ತುತ ತೆರಿಗೆಯನ್ನು ಆನ್‌ಲೈನ್ ಮೂಲಕವು ಪಾವತಿಸಬಹುದಾಗಿದ್ದು, ಈ ಕೆಳಗಿನ ಕ್ರಮವನ್ನು ಅನುಸರಿಸಬೇಕು.
Website:www.udupicity.mrc.gov.inಲ್ಲಿ ನಾಗರಿಕ ಸೇವೆಗಳು ಆಯ್ಕೆ ಮಾಡಿ, ಅದರಲ್ಲಿ ಆಸ್ತಿ ತೆರಿಗೆ ಕೋಷ್ಟಕ ತಂತ್ರಾಂಶದಲ್ಲಿ ಆಸ್ತಿ ವಿವರಗಳನ್ನು ನಮೂದಿಸಿ, ಪರಿಶೀಲಿಸಿಕೊಂಡು, ನಮೂನೆ-2ನ್ನು ಡೌನ್‌ಲೋಡ್ ಮಾಡಿ ಕೊಂಡ ನಂತರ ಆನ್‌ಲೈನ್ ಪಾವತಿ ಎಂದು ಆಯ್ಕೆ ಮಾಡಿಕೊಳ್ಳುವ ಮೂಲಕ ತೆರಿಗೆ ಪಾವತಿಸಬಹುದಾಗಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಕೋವಿಡ್‌ಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ಗಳು ಅನ್ವಯವಾಗುವ ಹಿನ್ನೆಲೆಯಲ್ಲಿ ಪಾವತಿಸಿರುವ ಚಲನ್ ಹಾಗೂ ವಿವರ ಪಟ್ಟಿಯ ಪ್ರತಿಯನ್ನು ನಗರಸಭೆಯ ಕಚೇರಿಗೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.





