ಉಡುಪಿ: ಜನಸ್ತೋಮದ ಮಧ್ಯೆ 130 ಮಂದಿಗೆ ಲಸಿಕೆ ವಿತರಣೆ
ಉಡುಪಿ, ಮೇ 12: ಉಡುಪಿ ಜಿಲ್ಲಾಸ್ಪತ್ರೆಯ ಲಸಿಕಾ ಕೇಂದ್ರವಾಗಿರುವ ಸೈಂಟ್ ಸಿಲಿಲಿಸ್ ಶಾಲೆಯಲ್ಲಿ ಇಂದು 45ವರ್ಷ ಮೇಲ್ಪಟ್ಟ 130 ಮಂದಿ ಕೋವಿಶೀಲ್ಡ್ ಎರಡನೇ ಡೋಸ್ ನೀಡಲಾಯಿತು.
ಇಂದು ಕೂಡ ಎರಡನೇ ಡೋಸ್ ಪಡೆಯಲು ಕೇಂದ್ರದಲ್ಲಿ ಜನಸ್ತೋಮ ವೇ ನೆರೆದಿದ್ದು, ನೂರಾರು ಮಂದಿ ಹಿರಿಯ ನಾಗರಿಕರು, ಮಹಿಳೆಯರು ಡೋಸ್ ಸಿಗದೆ ವಾಪಾಸ್ಸು ತೆರಳಿದರು. ಪ್ರತಿದಿನ ಲಸಿಕೆಗಾಗಿ ಬಂದು ನಿರಾಶೆ ಯಿಂದ ವಾಪಾಸ್ಸು ಹೋಗುವುದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಮಾಡ ಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂತು.
ಅದೇ ರೀತಿ ಈ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ನೋಂದಾಣಿ ಮಾಡಿದ 18ವರ್ಷ ಮೇಲ್ಪಟ್ಟ 148 ಮಂದಿಗೆ ಲಸಿಕೆ ನೀಡಲಾಯಿತು. ಇದರಿಂದ ಯಾವುದೇ ಗೊಂದಲ ಉಂಟಾಗಿಲ್ಲ. ಕೇವಲ ವೆಬ್‌ಸೈಟ್‌ನಲ್ಲಿ ನೋಂದಾಣಿ ಮಾಡಿಕೊಂಡು ಬಂದವರು ಲಸಿಕೆ ಸಿಗದೆ ವಾಪಾಸ್ಸು ತೆರಳಿರುವುದು ಕಂಡು ಬಂತು. ಲಸಿಕೆ ಪಡೆಯಲು ನೋಂದಾಣಿ ಜೊತೆ ಡಿಜಿಟಲ್ ನಂಬರಿನ ಮೊಬೈಲ್ ಸಂದೇಶ ಕೂಡ ಮುಖ್ಯವಾಗಿದೆ.
Next Story





