ಯುವ ಕಾಂಗ್ರೆಸ್‌ನಿಂದ ಊಟದ ಪೊಟ್ಟಣ ವಿತರಣೆ
ಮಂಗಳೂರು, ಮೇ 11: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್ ನೇತೃತ್ವದಲ್ಲಿ ಕೋವಿಡ್ ಹೆಲ್ಪ್ ಲೈನ್ ಹಾಗೂ ಕದ್ರಿವಾರ್ಡ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ಮಂಗಳವಾರ ನಗರದ ನಿರ್ಗತಿಕರು, ಭಿಕ್ಷುಕರು ಹಾಗೂ ಆಸ್ಪತ್ರೆಯ ರೋಗಿಗಳ ಸಂಬಂಧಿಕರ ಸಹಿತ ಸುಮಾರು 500 ಮಂದಿಗೆ ಊಟದ ಪೊಟ್ಟಣ ವಿತರಿಸಲಾಯಿತು.
ಈ ಸಂದರ್ಭ ನಝೀರ್ ಬಜಾಲ್, ನೀರಜ್‌ಪಾಲ್, ಆರೀಫ್ ಬಾವಾ ಬಂದರ್, ರಮಾನಂದ ಪೂಜಾರಿ, ಎಸ್.ಕೆ.ಸೌಹಾನ್, ರಾಜೇಶ್ ಬೆಂಗ್ರೆ, ಹಸನ್ ಡೀಲ್ಸ್, ತೃಪ್ತಿ ಕೋಟ್ಯಾನ್, ಮೀನಾ ಟೆಲ್ಲಿಸ್, ಆಸ್ಟಿನ್, ಯಶವಂತ್ ಪ್ರಭು, ಸೌಹಾನ್ ಡಿಸೋಜ, ಲಕ್ಷ್ಮಣ್ ಶೆಟ್ಟಿ, ಸನತ್ ಮತ್ತಿತರರು ಉಪಸ್ಥಿತರಿದ್ದರು.
Next Story





