ಸೆಲ್ಫ್‌ಲೆಸ್ ಚಾರಿಟೇಬಲ್ ಟ್ರಸ್ಟ್‌ನಿಂದ ಉಸ್ತಾದರುಗಳಿಗೆ ಸಹಾಯಧನ ವಿತರಣೆ
ಮಂಗಳೂರು, ಮೇ 11: ಕಳೆದೊಂದು ವರ್ಷದಿಂದ ಯಾವುದೇ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಬಡ ಉಸ್ತಾದರುಗಳಿಗೆ ಸೆಲ್ಫ್‌ಲೆಸ್ ಚಾರಿಟೇಬಲ್ ಟ್ರಸ್ಟ್‌ನಿಂದ ಸಹಾಯಧನ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಅಝೀಝ್ ನೂರಾನಿಯ ಅಧ್ಯಕ್ಷತೆಯಲ್ಲಿ ನಡೆದ ಆನ್‌ಲೈನ್ ಕಾರ್ಯಕ್ರಮದಲ್ಲಿ ಸೆಯ್ಯದ್ ಶಿಹಾಬುದ್ದೀನ್ ತಂಙಳ್ ಅಲ್ಬುಖಾರಿ ಕಿನ್ಯ ದುಆಃ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿ.ಎಂ.ಮುಹಮ್ಮದ್ ಮದನಿ ಕೆ.ಸಿ.ರೋಡ್ ಉದ್ಘಾಟಿಸಿ ದರು. ಟ್ರಸ್ಟ್ ಕ್ಯಾಬಿನೆಟ್ ಸದಸ್ಯ ಹಾಜಿ ಮುಹಮ್ಮದ್ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಟ್ರಸ್ಟ್ ಉಪಾಧ್ಯಕ್ಷ ಅಡ್ವಕೇಟ್ ಶೇಕ್ ಇಸಾಕ್ ಹಾಗೂ ಕ್ಯಾಬಿನೆಟ್ ಸದಸ್ಯ ಹನೀಫ್ ಇಂಜಿನಿಯರ್ ಪೆರಿಮಾರ್ ಮಾತನಾಡಿದರು. ಟ್ರಸ್ಟ್ ಕೋಶಾಧಿಕಾರಿ ಹನೀಫ್ ವಿಷನ್ ಸಾಲೆತ್ತೂರು ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿದರು. ಟ್ರಸ್ಟ್ ಕ್ಯಾಬಿನೆಟ್ ಸದಸ್ಯರಾದ ಅಶ್ರಫ್ ಮಾಸ್ಟರ್ ಮಿತ್ತೂರು, ಹನೀಫ್ ಹಾಜಿ ಬೆಂಗಳೂರು ಮತ್ತಿತರರು ಆನ್‌ಲೈನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ಸ್ವಾಗತಿಸಿದರು. ಕ್ಯಾಬಿನೆಟ್ ಸದಸ್ಯ ಬಶೀರ್ ಸಅದಿ ಒಮಾನ್ ವಂದಿಸಿದರು. ಕಾರ್ಯದರ್ಶಿ ಸಮೀರುದ್ದೀನ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.







