ಹೈದರಾಬಾದ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಹಾಲ್ ಗೆ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಸರು
ಮಧುಕರ್ ಶೆಟ್ಟಿ
ಹೈದರಾಬಾದ್, ಮೇ 11: ಹೈದರಾಬಾದ್ ನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಶನಲ್ ಪೊಲೀಸ್ ಅಕಾಡೆಮಿ ಇದರ ಹಾಲ್ ವೊಂದಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.
ಪೊಲೀಸ್ ಅಕಾಡೆಮಿಯ ಹಾಲ್ ನಂ.106ಕ್ಕೆ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ. ಮಧುಕರ್ ಶೆಟ್ಟಿ ಅವರ ಬದ್ಧತೆ, ಸಮರ್ಪಣೆಯನ್ನು ಗೌರವಿಸಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ಅವರು ಮಾದರಿ ಎಂಬ ಕಾರಣಕ್ಕಾಗಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ.ಕೆ.ಪಿ.ಎ. ಇಲ್ಯಾಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story