ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಆರೋಪ : ದ.ಕ.ಜಿಲ್ಲೆಯಲ್ಲಿ 152 ವಾಹನಗಳು ವಶ
ಮಂಗಳೂರು, ಮೇ 11: ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಮಂಗಳವಾರ 11 ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ 152 ವಾಹನಗಳನ್ನು ವಶ ಪಡಿಸಲಾಗಿದೆ. 632 ಮಂದಿಯ ವಿರುದ್ಧ ಮಾಸ್ಕ್ ಉಲ್ಲಂಘನೆ ಕೇಸು ದಾಖಲಿಸಲಾಗಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ಉಲ್ಲಂಘನೆ ಕಾಯ್ದೆಯಡಿ 10 ಕೇಸ್, 89 ವಾಹನ ವಶ, ಮಾಸ್ಕ್ ಉಲ್ಲಂಘನೆಯ 341 ಪ್ರಕರಣ ದಾಖಲಾಗಿದೆ.
ಜಿಲ್ಲಾ ಗ್ರಾಮಾಂತರದಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಮತ್ತು ರಾಷ್ಟ್ರೀಯ ವಿಪತ್ತು ಉಲ್ಲಂಘನೆ ಕಾಯ್ದೆಯಡಿ 1 ಕೇಸ್, ಮಾಸ್ಕ್ ಉಲ್ಲಂಘನೆಯ 291 ಪ್ರಕರಣ ಹಾಗೂ 63 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.
Next Story





