ಪರೀಕ್ಷೆಗೆ ಒಳಗಾಗದಿದ್ದರೂ ಕಾನ್ಸ್ ಟೇಬಲ್ ಪತ್ನಿಗೆ ಪಾಸಿಟಿವ್ ವರದಿ !

ಬೆಂಗಳೂರು, ಮೇ 11: ಕೋವಿಡ್ ಪರೀಕ್ಷೆಗೆ ಒಳಗಾಗದಿದ್ದರೂ, ಪೊಲೀಸ್ ಕಾನ್ಸ್ ಟೇಬಲ್‍ವೊಬ್ಬರ ಪತ್ನಿಯ ಮೊಬೈಲ್‍ಗೆ ಪಾಸಿಟಿವ್ ಸಂದೇಶ ಬಂದಿದೆ.
ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಓರ್ವರ ಪತ್ನಿಗೆ ಬಿಬಿಎಂಪಿಯಿಂದ ಕೋವಿಡ್ ಪಾಸಿಟಿವ್ ಸಂದೇಶ ಕಳುಹಿಸಲಾಗಿದ್ದು, ಇದನ್ನು ಕಂಡು ಮಹಿಳೆ ತಬ್ಬಿಬ್ಬಾಗಿದ್ದಾರೆ.
'ನಿಮಗೆ ಕೋವಿಡ್ ಪಾಸಿಟಿವ್ ಬಂದಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲಿಡಲಾಗಿದೆ. ಇದೀಗ ಆ್ಯಂಬುಲೆನ್ಸ್ ಬರುತ್ತೆ ಎಂದೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
Next Story





