ಪಾಕತಜ್ಞ ಕೆ.ನಾರಾಯಣ ಭಟ್ ನಿಧನ

ಉಡುಪಿ, ಮೇ 11: ಉಡುಪಿಯ ಹಿರಿಯ ಪಾಕತಜ್ಞ ಕೊಡಂಗಳ ನಾರಾಯಣ ಭಟ್ (83) ವಯೋಸಹಜ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅನೇಕ ಶಿಷ್ಯರನ್ನು ಅಗಲಿದ್ದಾರೆ.
ಉಡುಪಿ ಅಡುಗೆ ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದ ಇವರು ಅನೇಕ ಪರ್ಯಾಯೋತ್ಸವ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ನಡೆದ ನೂರಾರು ನಾಗಮಂಡಲೋತ್ಸವ, ಬ್ರಹ್ಮಕಲಶೋತ್ಸವಗಳಲ್ಲಿ ಸಾವಿರಾರು ಮಂದಿಗೆ ಸುಗ್ರಾಸ ಭೋಜನ ಸಿದ್ಧಪಡಿಸಿ ಪ್ರಸಿದ್ಧರಾಗಿದ್ದರು. ಅಡುಗೆ ಕ್ಷೇತ್ರಕ್ಕೆ ಇವರು ಅನೇಕ ಶಿಷ್ಯರನ್ನು ನೀಡಿದ್ದರು.
ನಾರಾಯಣ ಭಟ್ಟರ ನಿಧನಕ್ಕೆ ಉಡುಪಿಯ ಶಿವಳ್ಳಿ ಅಡುಗೆಯವರ ಸಂಘ ಮತ್ತು ಶಾಸಕ ಕೆ ರಘುಪತಿ ಭಟ್‌ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





