'ಆಕ್ಸಿಜನ್ ಸಿಲಿಂಡರ್ ಚಾಲೆಂಜ್'ನಲ್ಲಿ ಭಾಗಿಯಾಗಿ: ಕಾಸರಗೋಡು ಜಿಪಂ ಅಧ್ಯಕ್ಷೆ, ಜಿಲ್ಲಾಧಿಕಾರಿ ಮನವಿ

ಕಾಸರಗೋಡು, ಮೇ 12: ಕೋವಿಡ್-19 ತೀವ್ರವಾಗಿ ಹರಡುತ್ತಿರುವುದರಿಂದ ಕಾಸರಗೋಡು ಜಿಲ್ಲೆಯಲ್ಲೂ ಮೆಡಿಕಲ್ ಆಕ್ಸಿಜನ್ ಅಭಾವ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವ 'ಆಕ್ಸಿಜನ್ ಸಿಲಿಂಡರ್ ಚಾಲೆಂಜ್'ನಲ್ಲಿ ಎಲ್ಲರೂ ಭಾಗಿಗಳಾಗುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮನವಿ ಮಾಡಿದ್ದಾರೆ.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಲೆದೋರಿರುವ ಆಕ್ಸಿಜನ್ ಕೊರತೆ ಸಮಸ್ಯೆಯನ್ನು ಪರಿಹರಿಸಲು ಜಿಲ್ಲೆ ಎಲ್ಲ ಸಹೃದಯರಿಂದ ಸಹಕಾರ ಬಯಸುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ, ಉದ್ಯಮ, ಸ್ವಯಂ ಸೇವಾ ಸಂಘಟನೆಗಳ ಮಂದಿ, ಒಕ್ಕೂಟಗಳು ಆರೋಗ್ಯ- ಔದ್ಯಮಿಕ ಅಗತ್ಯಗಳಿಗಾಗಿ, ಇನ್ನಿತರ ವಿಚಾರಗಳಿಗಾಗಿ ಬಳಸಲಾಗುವ ಡಿ ಟೈಪ್ ಸಿಲಿಂಡರ್ ಗಳನ್ನು ಜಿಲ್ಲೆಗಾಗಿ ದೇಣಿಗೆ ನೀಡಿ 'ಆಕ್ಸಿಜನ್ ಸಿಲಿಂಡರ್ ಚಾಲೆಂಜ್'ನಲ್ಲಿ ಭಾಗಿಗಳಾಗಿ. ಆ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಿ ಎಂದು ಅವರು ಮನವಿ ಮಾಡಿದ್ದಾರೆ.
Next Story





