ಎಸೆಸ್ಸೆಫ್ ಸುರತ್ಕಲ್ ಡಿವಿಜನ್‌ನಿಂದ ಈದ್ ಕಿಟ್ ವಿತರಣೆ
ಸುರತ್ಕಲ್, ಮೇ 11: ಎಸೆಸ್ಸೆಫ್ ಸುರತ್ಕಲ್ ಡಿವಿಜನ್ ವತಿಯಿಂದ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಅವರ ನೇತೃತ್ವದಲ್ಲಿ ಡಿವಿಜನ್ ವ್ಯಾಪ್ತಿಯ 5 ಸೆಕ್ಟರ್ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಅರ್ಹ ಕುಟುಂಬಗಳಿಗೆ 147 ಈದ್ ಕಿಟ್ ವಿತರಣೆ ಕಾರ್ಯಕ್ರಮವು ಮಂಗಳವಾರ ಸುರತ್ಕಲ್ ನಲ್ಲಿ ನಡೆಯಿತು.
ಈ ಸಂದರ್ಭ ಎಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ, ಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ದಹ್‌ವಾ ಕಾರ್ಯದರ್ಶಿ ಆರೀಫ್ ಝುಹ್ರಿ ಮುಕ್ಕ , ಡಿವಿಜನ್ ಫೈನಾನ್ಸ್ ಸೆಕ್ರೆಟರಿ ತೌಸೀಫ್ ಬದ್ರಿಯಾ ನಗರ, ಡಿವಿಜನ್ ವಿಸ್ಡಂ ಕಾರ್ಯದರ್ಶಿ ಸಫ್ವಾನ್ ಜಂಕ್ಷನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಫ್ರಿದ್ ಜಂಕ್ಷನ್, ನಝರುದ್ದೀನ್ 9ನೇ ಬ್ಲಾಕ್ ಉಪಸ್ಥಿತರಿದ್ದರು.
ಡಿವಿಜನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ ಕಾಟಿಪಳ್ಳ 4ನೇ ಬ್ಲಾಕ್ ಸ್ವಾಗತಿಸಿ, ವಂದಿಸಿದರು.
Next Story





