Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇಸ್ರೇಲ್ ದಾಳಿ ವಿರೋಧಿಸಿ ಜಗತ್ತಿನಾದ್ಯಂತ...

ಇಸ್ರೇಲ್ ದಾಳಿ ವಿರೋಧಿಸಿ ಜಗತ್ತಿನಾದ್ಯಂತ ಪ್ರತಿಭಟನೆ

ನ್ಯೂಯಾಕ್, ಲಂಡನ್, ದಕ್ಷಿಣ ಆಫ್ರಿಕ, ಅಂಕಾರ, ಕರಾಚಿಯಲ್ಲಿ ಪ್ರತಿಭಟನಾ ಮೆರವಣಿಗೆ

ವಾರ್ತಾಭಾರತಿವಾರ್ತಾಭಾರತಿ12 May 2021 11:47 PM IST
share
ಇಸ್ರೇಲ್ ದಾಳಿ ವಿರೋಧಿಸಿ ಜಗತ್ತಿನಾದ್ಯಂತ ಪ್ರತಿಭಟನೆ

ನ್ಯೂಯಾರ್ಕ್, ಮೇ 12: ಫೆಲೆಸ್ತೀನ್ನ ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ ನ್ಯೂಯಾರ್ಕ್ನಿಂದ ಲಂಡನ್ವರೆಗೆ ಹಾಗೂ ಕರಾಚಿಯಿಂದ ರಬ್ಬತ್ವರೆಗೆ ಜಗತ್ತಿನ ಬೃಹತ್ ನಗರಗಳಲ್ಲಿ ಸಾವಿರಾರು ಜನರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ಜೆರುಸಲೇಮ್ನ ಹಳೆ ನಗರದಲ್ಲಿರುವ ಅಲ್-ಅಕ್ಸಾ ಮಸೀದಿಯಲ್ಲಿ ಇಸ್ರೇಲ್ ನಡೆಸುತ್ತಿರುವ ದಮನ ಕಾರ್ಯಾಚರಣೆ ಮತ್ತು ಆಕ್ರಮಿತ ಪೂರ್ವ ಜೆರುಸಲೇಮ್ನಲ್ಲಿ ಫೆಲೆಸ್ತೀನೀಯರನ್ನು ಅವರ ಮನೆಯಿಂದ ಹೊರದಬ್ಬಲು ಇಸ್ರೇಲ್ ರೂಪಿಸುತ್ತಿರುವ ಯೋಜನೆಗಳನ್ನು ವಿರೋಧಿಸಿ ಮಂಗಳವಾರವೂ ಜನರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದರು.

ಫೆಲೆಸ್ತೀನನ್ನು ಸ್ವತಂತ್ರಗೊಳಿಸಿ, ಇಸ್ರೇಲ್ ಒಂದು ಭಯೋತ್ಪಾದಕ ದೇಶ ಮತ್ತು ಆಕ್ರಮಣವನ್ನು ಕೊನೆಗೊಳಿಸಿ ಎಂಬ ಬರಹಗಳನ್ನು ಒಳಗೊಂಡ ಫಲಕಗಳನ್ನು ಪ್ರತಿಭಟನಕಾರರು ಹಿಡಿದುಕೊಂಡಿದ್ದರು.

ಇಸ್ರೇಲ್ ಆಕ್ರಮಿಸಿಕೊಂಡಿರುವ ಪೂರ್ವ ಜೆರುಸಲೇಮ್ನ ಉಪನಗರ ಶೇಖ್ ಜರಾಹ್ನಲ್ಲಿ ಫೆಲೆಸ್ತೀನೀಯರು ವಾಸಿಸುತ್ತಿದ್ದಾರೆ. ಅವರನ್ನು ಅಲ್ಲಿಂದ ಹೊರದಬ್ಬಲು ಪೂರ್ವ ಜೆರುಸಲೇಮ್ನಲ್ಲಿ ಮನೆ ಮಾಡಿಕೊಂಡಿರುವ ಯಹೂದಿಗಳು ದಶಕಗಳಿಂದಲೂ ಪ್ರಯತ್ನಿಸುತ್ತಿದ್ದಾರೆ. ಫೆಲೆಸ್ತೀನೀಯರ ಬಲವಂತದ ಒಕ್ಕಲೆಬ್ಬಿಸುವಿಕೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ಸೋಮವಾರ ನಡೆಯಬೇಕಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ವಾರಗಳ ಹಿಂದೆಯೇ ಆ ಪ್ರದೇಶದಲ್ಲಿ ಬಿಕ್ಕಟ್ಟು ನೆಲೆಸಿತ್ತು. ಇದೇ ಬಿಕ್ಕಟ್ಟು ಉದ್ವಿಗ್ನತೆಗೆ ತಿರುಗಿ ಇಸ್ರೇಲ್ ಸೈನಿಕರು ಗಾಝಾ ಪ್ರದೇಶದ ಮೇಲೆ ವಾಯು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 35ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ನ್ಯೂಯಾರ್ಕ್, ಲಂಡನ್, ಅಂಕಾರ, ಬೈರೂತ್, ಕರಾಚಿ, ದಕ್ಷಿಣ ಆಫ್ರಿಕದ ಸ್ಯಾಂಡ್ಟನ್, ರಬ್ಬತ್ ಮುಂತಾದ ನಗರಗಳಲ್ಲಿ ಇಸ್ರೇಲ್ ಆಕ್ರಮಣದ ವಿರುದ್ಧ ಪ್ರತಿಭಟನೆಗಳು ನಡೆದಿವೆ.

ಸಂಘರ್ಷದಿಂದ ಹಿಂದೆ ಸರಿಯಲು ಬ್ರಿಟನ್ ಪ್ರಧಾನಿ ಕರೆ
ಲಂಡನ್: ಸಂಘರ್ಷದಿಂದ ಹಿಂದೆ ಸರಿಯುವಂತೆ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಇಸ್ರೇಲ್ ಮತ್ತು ಫೆಲೆಸ್ತೀನೀಯರಿಗೆ ಕರೆ ನೀಡಿದ್ದಾರೆ ಹಾಗೂ ಉಭಯ ಬಣಗಳು ಸಂಯಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಹೆಚ್ಚುತ್ತಿರುವ ಹಿಂಸೆ ಮತ್ತು ನಾಗರಿಕರ ಸಾವು-ನೋವಿನಿಂದ ಬ್ರಿಟನ್ ಕಳವಳಗೊಂಡಿದೆ ಹಾಗೂ ತಕ್ಷಣ ಉದ್ವಿಗ್ನತೆ ಶಮನವನ್ನು ನೋಡಲು ನಾವು ಕಾತರರಾಗಿದ್ದೇವೆ ಎಂದು ಅವರು ಜಾನ್ಸನ್ ಟ್ವೀಟ್ ಮಾಡಿದ್ದಾರೆ.

ದಾಳಿ ಮುಂದುವರಿಕೆ: ಇಸ್ರೇಲ್ ರಕ್ಷಣಾ ಸಚಿವ
ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಲು ಯಾವುದೇ ನಿರ್ದಿಷ್ಟ ದಿನಾಂಕವಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗಾಂಟ್ಝ್ ಹೇಳಿದ್ದಾರೆ.

ಇಸ್ರೇಲ್ ಸೇನೆಯು ದಾಳಿಯನ್ನು ಮುಂದುವರಿಸುತ್ತದೆ ಹಾಗೂ ದೀರ್ಘಾವಧಿಗಾಗಿ ಸಂಪೂರ್ಣ ವೌನವನ್ನು ತರುತ್ತದೆ ಎಂದು ಇಸ್ರೇಲ್ನ ದಕ್ಷಿಣದ ನಗರ ಆ್ಯಶ್ಕೆಲೊನ್ನಿಂದ ಮಾತನಾಡಿದ ಅವರು ಹೇಳಿದರು.

ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಜೊನಾಥನ್ ಕಾನ್ರಿಕಸ್ ಹೇಳಿದ್ದಾರೆ.

ಇಸ್ರೇಲ್ ವಿರುದ್ಧ ಅಂತಾರಾಷ್ಟ್ರೀಯ ಕ್ರಮಕ್ಕೆ ಟರ್ಕಿ ಒತ್ತಾಯ

ಗಾಝಾ ಪಟ್ಟಿಯಲ್ಲಿ ನೆಲೆಸಿರುವ ಸಂಘರ್ಷದ ಬಗ್ಗೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಫೋನ್ನಲ್ಲಿ ಬುಧವಾರ ಮಾತುಕತೆ ನಡೆಸಿದ್ದಾರೆ ಎಂದು ಟರ್ಕಿ ಅಧ್ಯಕ್ಷರ ಕಚೇರಿ ತಿಳಿಸಿದೆ.

ಅಂತರ್ರಾಷ್ಟ್ರೀಯ ಸಮುದಾಯವು ಇಸ್ರೇಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಟರ್ಕಿ ಒತ್ತಾಯಿಸಿದೆ.

ಅಂತರ್ರಾಷ್ಟ್ರೀಯ ಸಮುದಾಯವು ಇಸ್ರೇಲ್ಗೆ ಇನ್ನು ಮುಂದೆ ಇಂಥ ಕೃತ್ಯಕ್ಕೆ ಕೈಹಾಕದಂಥ ಪಾಠವೊಂದನ್ನು ಕಲಿಸಬೇಕಾಗಿದೆ ಎಂದು ಮಾತುಕತೆಯ ವೇಳೆ ಎರ್ದೊಗಾನ್ ಹೇಳಿದರು. ಈ ನಿಟ್ಟಿನಲ್ಲಿ ಟರ್ಕಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಪಶ್ಚಿಮ ದಂಡೆಯಲ್ಲಿ ಯುದ್ಧಾಪರಾಧ ಸಾಧ್ಯತೆ: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಕಳವಳ

ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹೆಚ್ಚುತ್ತಿರುವ ಹಿಂಸೆಯ ಬಗ್ಗೆ ಅಂತರ್ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಕಳವಳ ವ್ಯಕ್ತಪಡಿಸಿದೆ. ಅಲ್ಲಿ ಯುದ್ಧಾಪರಾಧಗಳು ನಡೆದಿರುವ ಸಾಧ್ಯತೆಯಿದೆ ಎಂದು ಐಸಿಸಿ ಪ್ರಾಸಿಕ್ಯೂಟರ್ ಫಟೂ ಬೆನ್ಸೌಡ ಹೇಳಿದ್ದಾರೆ.
ಪೂರ್ವ ಜೆರುಸಲೇಮ್ ಸೇರಿದಂತೆ ಪಶ್ಚಿಮ ದಂಡೆ ಹಾಗೂ ಗಾಝಾ ಸುತ್ತಮುತ್ತ ನಡೆಯುತ್ತಿರುವ ಹಿಂಸೆಯಿಂದ ನಾನು ಕಳವಳಗೊಂಡಿದ್ದೇನೆ. ಅಲ್ಲಿ ಯುದ್ಧಾಪರಾಧ ನಡೆದಿರುವ ಸಾಧ್ಯತೆಗಳೂ ಇವೆ ಎಂಬುದಾಗಿ ಬೆನ್ಸೌಡ ಟ್ವೀಟ್ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X