18 ರಿಂದ 45 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ವಿತರಣೆ ಸದ್ಯಕ್ಕೆ ಸ್ಥಗಿತ: ಆರೋಗ್ಯ ಇಲಾಖೆ

ಬೆಂಗಳೂರು, ಮೇ 13: ರಾಜ್ಯದಲ್ಲಿ 18 ರಿಂದ 44 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗಧಿಪಡಿಸಿಕೊಂಡವರೂ ಸೇರಿದಂತೆ) ನಾಳೆಯಿಂದ (ಮೇ 14) ಮುಂದಿನ ಆದೇಶದವರೆಗೆ ಕೋವಿಡ್ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಇಲಾಖೆ, ರಾಜ್ಯ ಸರ್ಕಾರವು ನೇರವಾಗಿ 18 ರಿಂದ 44 ವರ್ಷದ ವಯೋಮಾನದ ಫಲಾನುಭವಿಗಳ ಲಸಿಕಾಕರಣಕ್ಕೆ ಖರೀದಿಸಿದ ಪೂರ್ಣ ದಾಸ್ತಾನನ್ನು 2ನೆಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದೆ.
ಮೇ 7 ರಿಂದ ರಾಜ್ಯ ಸರಕಾರವು ಭಾರತ ಸರಕಾರದಿಂದ 45 ವರ್ಷ ಮೇಲ್ಪಟ್ಟವರ ಲಸಿಕಾಕರಣಕ್ಕಾಗಿ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಿರುತ್ತದೆ.
ಈ ಆದೇಶವು ಕೋವಿಡ್ ಲಸಿಕಾಕರಣ ನಡೆಸುತ್ತಿರುವ ಎಲ್ಲಾ ಸರಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಅನ್ವಯಿಸುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.





