ಕಾಪು ಯೂತ್ ಕಾಂಗ್ರೆಸ್‍ನಿಂದ ವಸ್ತ್ರ ವಿತರಣೆ

ಪಡುಬಿದ್ರಿ: ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಕಾಪು ಬ್ಲಾಕ್ ಯುವ ಕಾಂಗ್ರೆಸ್(ದಕ್ಷಿಣ) ಸಮಿತಿ ಇದರ ವತಿಯಿಂದ ಮೂಲ್ಕಿಯಲ್ಲಿರುವ ಅಪತ್ಬಾಂಧವ ಸೈಕೋ ರಿಹ್ಯಾಬಿಲಿಟೇಷನ್ ಸೆಂಟರ್‍ನಲ್ಲಿರುವ ಸುಮಾರು 60 ಮಂದಿ ಅನಾಥ ವ್ಯಕ್ತಿಗಳಿಗೆ ದಿನನಿತ್ಯ ಧರಿಸುವ ಬಟ್ಟೆಗಳನ್ನು ವಿತರಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ ಸುಕುಮಾರ್ ಮಾತನಾಡಿ, ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ಮಾಸಿಕವಾಗಿ ನೊಂದಿರುವ ಅನಾಥ ವ್ಯಕ್ತಿಗಳಿಗೆ ಬಟ್ಟೆಗಳನ್ನು ನೀಡಿ ಅವರ ಮುಖ ದಲ್ಲಿಯೂ ಸಂತಸ ಕಾಣಬೇಕೆಂಬ ಉದ್ದೇಶದಿಂದ ರೆಲ್ಲರೂ ಸೇರಿ ಬಟ್ಟೆಗಳನ್ನು ನೀಡಿರುವ ಕಾರ್ಯವನ್ನು ಶ್ಲಾಘಿಸಿದರು.
ಅಪತ್ಬಾಂಧವ ಸ್ಯೆಕೊ ರಿಹ್ಯಾಬಿಲಿಟೇಶನ್ ಸೆಂಟರ್‍ನ ಅಡಳಿತ ನಿರ್ದೇಶಕ ಅಪತ್ಬಾಂಧವ ಅಸೀಫ್ ಮಾತನಾಡಿ, ಸಮಾಜದಲ್ಲಿ ಮಾನಸಿಕ ವಾಗಿ ನೊಂದ ಅನಾಥರಿಗೆ ಬಟ್ಟೆಗಳನ್ನು ನೀಡಿರುವುದು ಉತ್ತಮ ಕೆಲಸ. ಮುಂದೆಯೂ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸಮಾಜಮುಖಿ ಕಲಸಗಳು ನಡೆಯಲಿ ಎಂದು ಹಾರೃಸಿದರು.
ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್, ಶೇಯಸ್ ಎರ್ಮಾಳ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಫಿ ಎಂ.ಯಸ್, ಜ್ಯೋತಿ ಮೆನನ್, ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಹೆಜಮಾಡಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ನಿಯಾಜ್, ಸೂರಾಜ್ ಹೆಜಮಾಡಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀರ್ ಕರ್ಕೇರ, ಕಾಂಗ್ರೆಸ್ ಮುಖಂಡರಾದ ನಿಝಮ್ ಕಂಚಿನಡ್ಕ, ಕಾರ್ಯದರ್ಶಿ ಮಹಮ್ಮದ್ ಹಕೀಮ್, ಸಿರಾಜ್ ಹೆಜಮಾಡಿ, ಉಪಸ್ಥಿತರಿದ್ದರು.







