ಜೆಸಿಐ ಮಂಗಳ ಗಂಗೋತ್ರಿ ವತಿಯಿಂದ ಕೋವಿಡ್ ಸೇವೆ ಸಲ್ಲಿಸಿದವರಿಗೆ "ಸೆಲ್ಯೂಟ್ ದಿ ಸೈಲೆಂಟ್ ವಾರ್ಕರ್" ಸನ್ಮಾನ

ಉಳ್ಳಾಲ: ಜೆಸಿಐ ಮಂಗಳ ಗಂಗೋತ್ರಿ ವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಸನ್ಮಾನ ಕಾರ್ಯಕ್ರಮ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಮಿಸ್ರಿಯ ಸುಹಾನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕೋವಿಡ್ ಎಂಬ ರೋಗ ವೈದ್ಯರಿಗೂ ಹೊಸ ಅನುಭವವಾಗಿದೆ. ಕೊರೊನಾ ವಿರುದ್ಧ ಸಿಬ್ಬಂದಿ ಸಹಿತ ವೈದ್ಯರ ತಂಡ ಸಮಾನ ಪ್ರಯತ್ನದಿಂದ ಹೋರಾಡಿದ್ದೇವೆ. ಈಗ ಮತ್ತೆ ಕೊರೊನಾ ಎರಡನೇ ಅಲೆ ಬಂದಿದೆ ನಾಗರಿಕರು ಸ್ವಯಂ ಜಾಗೃತರಾಗಿ ಎಂದು ಹೇಳಿದರು.
ವಲಯ ಅರೋಗ್ಯ ಶಿಕ್ಷಣ ಅಧಿಕಾರಿ ಲಲಿತ ಮಾತನಾಡಿ ಜೆಸಿಐ ಸಂಸ್ಥೆ ಸಮಾಜ ಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಅದರ ಜೊತೆಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆಗೈಯುವರನ್ನು ಗುರುತಿಸಿ ಗೌರವಿಸುತ್ತಾರೆ. ಇಂದು ನಮ್ಮ ಸೇವೆಯನ್ನು ಗುರುತಿಸಿ ನಮ್ಮ ತಂಡಕ್ಕೆ ಗೌರವಿಸಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿರುವಿರಿ. ನಿಮ್ಮ ವಿಶ್ವಾಸವನ್ನು ಉಳಿಸುವ ಕಾರ್ಯ ನಾವು ಮಾಡುತ್ತೇವೆ ಎಂದರು.
ಈ ಸಂದರ್ಭ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸುಮಾರು 20 ವರ್ಷ ಗಳಿಂದಲೂ ಅಧಿಕ ವರ್ಷ ಸೇವೆ ಸಲ್ಲಿಸಿದ ವೈದಕೀಯ ಸಿಬ್ಬಂದಿ ಗೆ, ವೈದ್ಯಾಧಿಕಾರಿಗಳಿಗೆ "ಸೆಲ್ಯೂಟ್ ದಿ ಸೈಲೆಂಟ್ ವರ್ಕರ್" ಬಿರುದು ನೀಡಿ ಗೌರವಿಸಲಾಯಿತು.
ಮಂಗಳಗಂಗೋತ್ರಿ ಘಟಕದ ಅಧ್ಯಕ್ಷ ಜೆ.ಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಲೀಲ್ ಇಬ್ರಾಹೀಂ, ಯೋಗಿನಿ, ಮರಿಯಮ್ಮ, ಸುಷ್ಮಾ, ಸುರೇಂದ್ರ ಪೂಜಾರಿ, ಜೆಸಿಐ ಸದಸ್ಯ ಆರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಜೆ.ಸಿ. ತ್ಯಾಗಮ್ ಹರೇಕಳ ಸಂಸ್ಥೆಯ ಕಾರ್ಯ ಚಟುವಟಿಗಳ ಬಗ್ಗೆ ಮಾಹಿತಿ ನೀಡಿದರು. ಘಟಕದ ಉಪಾಧ್ಯಕ್ಷೆ ಜೆ.ಸಿ ಜಯಲಕ್ಷ್ಮಿ ಕಾರ್ಯಕ್ರಮದ ನಿರೂಪಿಸಿದರು. ಜೆ.ಸಿ ನಳಿನಿ ಗಟ್ಟಿ ಸ್ವಾಗತಿಸಿದರು. ಘಟಕದ ನಿಕಟ ಪೂರ್ವ ಅಧ್ಯಕ್ಷೆ ಜೆ.ಸಿ ಪವಿತ್ರ ಗಣೇಶ್ ವಂದಿಸಿದರು.







