ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಮುಂದೂಡಿದ ಯುಪಿಎಸ್ ಸಿ

ಹೊಸದಿಲ್ಲಿ : ಜೂನ್ 27 ಕ್ಕೆ ನಿಗದಿಯಾಗಿದ್ದ ಸಿವಿಲ್ ಸರ್ವೀಸಸ್ ನ ಪ್ರಾಥಮಿಕ ಪರೀಕ್ಷೆಯನ್ನು ಯುಪಿಎಸ್‌ಸಿ ಮುಂದೂಡಿದೆ.
ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 10 ರಂದು ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ ) ತಿಳಿಸಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್) ಹಾಗೂ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ಆಯ್ಕೆ ಮಾಡಲು ಆಯೋಗವು ಪ್ರತಿ ವರ್ಷ ಪ್ರಾಥಮಿಕ, ಪ್ರಮುಖ ಹಾಗೂ ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ ..
ಕಳೆದ ವರ್ಷ, ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಮೇ 31 ರ ಬದಲಿಗೆ ಅಕ್ಟೋಬರ್ 4 ಕ್ಕೆ ಮರು ನಿಗದಿಪಡಿಸಲಾಗಿತ್ತು. ಇಲ್ಲಿಯವರೆಗೆ, ಮುಖ್ಯ ಲಿಖಿತ ಪರೀಕ್ಷೆ ಮುಗಿದಿದೆ. ಕೊರೋನವೈರಸ್ ಪ್ರಕರಣಗಳು ಹೆಚ್ಚಾದ ಕಾರಣ ಸಂದರ್ಶನವನ್ನು ತಡೆಹಿಡಿಯಲಾಗಿತ್ತು.
Next Story