ತಮಿಳುನಾಡು: ಬಾಯ್ಲರ್ ಸ್ಫೋಟ, ನಾಲ್ವರು ಮೃತ್ಯು, 20 ಜನರಿಗೆ ಗಾಯ

ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡಿನ ಕಡಲೂರಿನ ಸಿಪ್ಕಾಟ್ ಇಂಡಸ್ಟ್ರಿಯಲ್ ಎಸ್ಟೇ ಟ್ ನಲ್ಲಿರುವ ಕೀಟನಾಶಕ ಉತ್ಪಾದನೆಯ ಕಾರ್ಖಾನೆಯಲ್ಲಿ ಗುರುವಾರ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ.
ಕೀಟನಾಶಕಗಳನ್ನು ತಯಾರಿಸುವ ಕ್ರಿಮ್ಸನ್ ಆರ್ಗಾನಿಕ್ಸ್ ಎಂಬ ಕಂಪನಿಯಲ್ಲಿ ಈ ಅಪಘಾತ ಸಂಭವಿಸಿದೆ.
ಕಂಪನಿಯ ಎರಡನೇ ಮಹಡಿಯಲ್ಲಿರುವ ಬಾಯ್ಲರ್ ಸ್ಫೋಟಗೊಂಡ ನಂತರ ಈ ಅಪಘಾತ ಸಂಭವಿಸಿದೆ. ಬೆಂಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇತರ ಇಬ್ಬರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಇತರ 20 ಮಂದಿ ಕೂಡ ತೀವ್ರವಾಗಿ ಗಾಯಗೊಂಡು ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತ ಕುಟುಂಬಗಳಿಗೆ ತಲಾ 3 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ಗಂಭೀರ ಗಾಯಗೊಂಡ 10 ಜನರ ಕುಟುಂಬಗಳಿಗೆ ಒಂದು ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದ್ದಾರೆ.
Next Story





