ನದಿಗಳಲ್ಲಿ ತೇಲಿ ಬರುತ್ತಿರುವ ಮೃತದೇಹಗಳು: ಕಳವಳ ವ್ಯಕ್ತಪಡಿಸಿ ಸರಕಾರದ ವಿರುದ್ಧ ಕಿಡಿ ಕಾರಿದ ಫರ್ಹಾನ್ ಅಖ್ತರ್

ಮುಂಬೈ: ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಹಲವಾರು ಮೃತದೇಹಗಳು ತೇಲಿ ಬರುತ್ತಿರುವ ಆಘಾತಕರ ಬೆಳವಣಿಗೆ ಕುರಿತು ಬಾಲಿವುಡ್ ನಟ ಹಾಗೂ ಚಿತ್ರ ತಯಾರಕ ಫರ್ಹಾನ್ ಅಖ್ತರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರಲ್ಲದೆ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮೃತದೇಹಗಳು ತೇಲಿ ಬರುತ್ತಿರುವ ವೀಡಿಯೋ ಮತ್ತು ಫೋಟೋಗಳು 'ಹೃದಯವಿದ್ರಾವಕ' ಎಂದು ಬಣ್ಣಿಸಿದ ಅವರು 'ವ್ಯವಸ್ಥೆಯ ವೈಫಲ್ಯಕ್ಕೆ ಹೊಣೆಗಾರಿಕೆಯನ್ನು ಸಂಬಂಧಿತರು ವಹಿಸಿಕೊಳ್ಳಬೇಕಿದೆ' ಎಂದಿದ್ದಾರೆ. ಈ ಬೆಳವಣಿಗೆ ಕುರಿತು ಬಾಲಿವುಡ್ಡಿನಿಂದ ಫರ್ಹಾನ್ ಅಖ್ತರ್ ಅವರ ಪ್ರತಿಕ್ರಿಯೆಯೇ ಮೊದಲಿನದ್ದಾಗಿದೆ.
"ನದಿಗಳಲ್ಲಿ ತೇಳಿ ಬರುತ್ತಿರುವ ಹಲವಾರು ಮೃತದೇಹಗಳು ನಿಜವಾಗಿಯೂ ಹೃದಯವಿದ್ರಾವಕ. ಈ ವೈರಸ್ ಒಂದು ದಿನ ಸೋಲಲಿದೆ ಆದರೆ ವ್ಯವಸ್ಥೆಯಲ್ಲಿನ ವೈಫಲ್ಯಗಳಿಗೆ ಹೊಣೆಗಾರಿಕೆ ಹೊರಬೇಕಾಗಿದೆ. ಅಲ್ಲಿಯ ತನಕ ಈ ಸಾಂಕ್ರಾಮಿಕದ ಅಧ್ಯಾಯ ಮುಕ್ತಾಗೊಳ್ಳದು" ಎಂದು ಅವರು ಟ್ವೀಟ್ ಮಾಡಿದ್ದಾರೆ.
The news of scores of bodies being discovered floating in rivers and washed up on its banks is absolutely heartbreaking. The virus will be defeated someday but there has to be accountability for these failures in the system. Until then, the pandemic chapter is not closed!
— Farhan Akhtar (@FarOutAkhtar) May 12, 2021







