ಆಗಸ್ಟ್-ಡಿಸೆಂಬರ್ ನಡುವೆ 5 ತಿಂಗಳಲ್ಲಿ 216 ಕೋಟಿ ಕೋವಿಡ್ ಡೋಸ್ ಗಳು ಲಭ್ಯ: ಕೇಂದ್ರ

ಹೊಸದಿಲ್ಲಿ: ರಾಜ್ಯಗಳು ಕೊರೋನವೈರಸ್ ಲಸಿಕೆಗಳ ಕೊರತೆ ಎದುರಿಸುತ್ತಿರುವಾಗ ಕೇಂದ್ರ ಸರಕಾರವು ಸಮಾಧಾನಕರ ವಿಷಯವನ್ನು ಪ್ರಕಟಿಸಿದೆ. ಆಗಸ್ಟ್ ಹಾಗೂ ಡಿಸೆಂಬರ್ ನಡುವೆ ಐದು ತಿಂಗಳಲ್ಲಿ ಎರಡು ಬಿಲಿಯನ್ ಡೋಸ್‌ಗಳು ದೇಶದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರ ಗುರುವಾರ ಭರವಸೆ ನೀಡಿದೆ.
ರಷ್ಯಾದ ಆಂಟಿ-ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಮುಂದಿನ ವಾರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.
"ಭಾರತಕ್ಕೆ ಹಾಗೂ ಭಾರತದ ಜನರಿಗೆ ಐದು ತಿಂಗಳಲ್ಲಿ ಎರಡು ಬಿಲಿಯನ್ ಡೋಸ್ ಗಳನ್ನು (216 ಕೋಟಿ) ತಯಾರಿಸಲಾಗುವುದು. ಮುಂದಿನ ದಿನಗಳಲ್ಲಿ ಲಸಿಕೆ ಎಲ್ಲರಿಗೂ ಲಭ್ಯವಿರುತ್ತದೆ" ಎಂದು ನೀತಿ ಅಯೋಗದ ಸದಸ್ಯ ವಿ.ಕೆ.ಪಾಲ್ ಹೇಳಿದರು.
ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಕೋವಿಶೀಲ್ಡ್‌ನ 75 ಕೋಟಿ ಡೋಸ್‌ಗಳ ಉತ್ಪಾದನೆಯನ್ನು ಅಂದಾಜಿಸಲಾಗಿದ್ದು, 55 ಕೋಟಿ ಡೋಸ್ ಕೋವ್ಯಾಕ್ಸಿನ್ ಲಭ್ಯವಾಗಲಿದೆ ಎಂದು ಪಾಲ್ ಅವರು ಅಂದಾಜಿಸಿದ್ದಾರೆ.
Next Story





