ಅಸ್ಸಾಂ: 18 ಕಾಡಾನೆಗಳು ಮೃತ್ಯು

ಗುವಾಹಟಿ: ಅಸ್ಸಾಂನ ನಾಗಾನ್-ಕಾರ್ಬಿ ಆಂಗ್ಲಾಂಗ್ ಜಿಲ್ಲೆಯ ಗಡಿಯಲ್ಲಿರುವ ಬೆಟ್ಟದ ಮೇಲೆ ಕನಿಷ್ಠ 18 ಕಾಡಾನೆಗಳು ಗುರುವಾರ ಸತ್ತುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಅರಣ್ಯ ಇಲಾಖೆ ಆನೆಗಳ ಸಾವಿನ ಬಗ್ಗೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಿಡಿಲು ಬಡಿದು ಕಾಡಾನೆಗಳು ಸಾವನ್ನಪ್ಪಿರಬಹುದು ಎಂದು ತಿಳಿದುಬಂದಿದೆ.
ಕತಿಯಾಟೋಲಿ ವ್ಯಾಪ್ತಿಯ ಕುಂದೋಲಿ ಪ್ರಸ್ತಾವಿತ ಮೀಸಲು ಅರಣ್ಯದ ಬಳಿಯಿರುವ ಗುಡ್ಡಗಾಡು ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಸ್ಸಾಂನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಮಿತ್ ಸಹಾಯ್ ಅವರು 'ಇಂಡಿಯಾ ಟುಡೆ'ಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.
ನಾಲ್ಕು ಆನೆಗಳು ಒಂದು ಸ್ಥಳದಲ್ಲಿ ಹಾಗೂ ಉಳಿದ 14 ಆನೆಗಳು ಇತರ ಸ್ಥಳಗಳಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯಿಂದ ಆನೆಗಳು ಸಿಡಿಲು ಬಡಿದು ಕೊಲ್ಲಲ್ಪಟ್ಟಿರಬಹುದು ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಪಶುವೈದ್ಯಕೀಯ ವೈದ್ಯರನ್ನು ಸ್ಥಳಕ್ಕೆ ಕರೆದೊಯ್ಯಲಾಗಿದೆ" ಎಂದು ಸಹಾಯ್ ತಿಳಿಸಿದರು.