ಪಪ್ಪು ಯಾದವ್ ಬಂಧನದಿಂದಾಗಿ ಬಹಿರಂಗಗೊಂಡ ಬಿಹಾರ ಎನ್ಡಿಎಯಲ್ಲಿನ ಬಿರುಕುಗಳು
32 ವರ್ಷ ಹಳೆಯ ಪ್ರಕರಣದಡಿಯಲ್ಲಿ ಯಾದವ್ ರನ್ನು ಬಂಧಿಸಿದ ಪೊಲೀಸರು

Photo: ANI
ಪಾಟ್ನಾ: ಈ ಹಿಂದೆ ಡಾನ್ ಆಗಿದ್ದು, ಬಳಿಕ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜನ್ ಅಧಿಕಾರಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಂಸದ ರಾಕೇಶ್ ರಂಜನ್ ಯಾನೆ ಪಪ್ಪು ಯಾದವ್ ರನ್ನು ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದು ಬಿಹಾರದಾದ್ಯಂತ ಸುದ್ದಿಯಾಗಿದೆ. ಈ ಬಂಧನವು ಬಿಹಾರದ ಎನ್ಡಿಎಯೊಳಗಿನ ಬಿರುಕುಗಳನ್ನು ಬಹಿರಂಗಪಡಿಸಿದೆ ಎಂದು theprint.in ವರದಿ ಮಾಡಿದೆ.
ಕ್ಯಾಬಿನೆಟ್ ಮಿಸ್ಟರ್ ಆಗಿರುವ ಮುಕೇಶ್ ಸಹಾನಿಯವರ ವಿಕಾಶಶೀಲ ಇನ್ಸಾನ್ ಪಾರ್ಟಿಯು ಪಪ್ಪು ಯಾದವ್ ರ ಬಂಧನವನ್ನು ಖಂಡಿಸಿದೆ. ಒಬ್ಬ ಜನನಾಯಕ ಜನರ ನಡುವೆ ಇದ್ದು ಸೇವೆ ಮಾಡುತ್ತಿರಬೇಕೆ ಹೊರತು ಜೈಲಿನಲ್ಲಿರಬೇಕಾದದ್ದಲ್ಲ. ಇದು ಸೂಕ್ಷ್ಮವಲ್ಲದ ಕಾರ್ಯವಾಗಿದ್ದು, ಅವರಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪಾಲುದಾರರಾಗಿರುವ ಹಾಗೂ ಹಿಂದೂಸ್ತಾನ್ ಅವಾಮ್ ಮೋರ್ಚಾದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಜಿ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಪಪ್ಪು ಯಾದವ್ ಪೀಡಿತ ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಇವರ ಬಂಧನವು ಅಪಾಯಕಾರಿ ಮತ್ತು ಅಸಾಂವಿಧಾನಿಕ ಎಂದು ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುತ್ತಿದ್ದು, ಬಿಹಾರದಲ್ಲೂ ದೈನಂದಿನ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ನಡುವೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಸೇರಿದಂತೆ ಹಲವಾರು ಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಪಪ್ಪು ಯಾದವ್ ತಳಮಟ್ಟದಲ್ಲಿ ಸಕ್ರಿಯರಾಗಿದ್ದರು.
ಸಂಸದರ ನಿಧಿಯಿಂದ ಕೊಂಡ ಆಂಬುಲೆನ್ಸ್ ಗಳನ್ನು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ವೃಥಾ ಕೊಳೆಯಿಸುತ್ತಿದ್ದಾರೆ. ಅವು ಉಪಯೋಗಶೂನ್ಯವಾದ ಪರಿಸ್ಥಿತಿಯಲ್ಲಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು. ಸರಿಯಾದ ಚಾಲಕರು ಸಿಗದ ಕಾರಣ ಆಂಬುಲೆನ್ಸ್ ಗಳು ಅನಾಥವಾಗಿದೆ ಎಂದು ಬಳಿಕ ರೂಡಿ ಸ್ಪಷ್ಟನೆ ನೀಡಿದ್ದರು. ಇದಾದ ಒಂದೇ ವಾರದಲ್ಲಿ ಪಪ್ಪು ಯಾದವ್ ರನ್ನು 32 ವರ್ಷ ಹಳೆಯ ಕಿಡ್ನಾಪ್ ಕೇಸ್ ನಲ್ಲಿ ಬಂಧಿಸಲಾಗಿದೆ.
ಕೋವಿಡ್ ರೋಗಿಯ ಪತ್ನಿಯೋರ್ವರು ತಮ್ಮ ಮೇಲೆ ವೈದ್ಯರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿದ್ದನ್ನು ಪಪ್ಪು ಯಾದವ್ ಸಾಮಾಜಿಕ ತಾಣದಾದ್ಯಂತ ಪ್ರಚಾರ ಮಾಡಿದ್ದರು. ಇದು ಬಿಹಾರ ಸರಕಾರದ ಹಲವಾರು ಲೋಪದೋಷಗಳನ್ನು ಎತ್ತಿ ತೋರಿಸಿತ್ತು. ಮಂಗಳವಾರ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾರೆಂದು ಪಪ್ಪು ಯಾದವ್ ರನ್ನು ಬಂಧಿಸಿದ ಬಳಿಕ 32 ವರ್ಷದ ಹಳೆಯ ಅಪಹರಣ ಪ್ರಕರಣದಲ್ಲಿ ಬಂಧನ ಮುಂದುವರಿಸಲಾಗಿತ್ತು.
ಆರೆ ಈ ಹಿಂದೆ ಅಪಹರಣಕ್ಕೊಳಗಾಗಿದ್ದಾನೆ ಎಂದು ಹೇಳಲ್ಪಟ್ಟಿದ್ದ ವ್ಯಕ್ತಿಯ ನನ್ನನ್ನು ಯಾರೂ ಅಪಹರಣ ಮಾಡಿಲ್ಲ ಎಂದು ಹೇಳುತ್ತಿದ್ದು, ಪ್ರಕರಣಕ್ಕೆ ಗೊಂದಲಮಯ ತಿರುವು ದೊರಕಿದೆ.







