'ಕೆಲಸ ಮಾಡುವವರು ತಪ್ಪುಗಳನ್ನು ಮಾಡುತ್ತಾರೆ': ಕೇಂದ್ರವನ್ನು ಮತ್ತೆ ಸಮರ್ಥಿಸಿದ ಅನುಪಮ್ ಖೇರ್
ಹೊಸದಿಲ್ಲಿ: ನಟ ಅನುಪಮ್ ಖೇರ್ ಅವರು ಶುಕ್ರವಾರ ಬೆಳಿಗ್ಗೆ ಹಿಂದಿಯಲ್ಲಿ ಆರು ಸಾಲಿನ ಕವಿತೆಯನ್ನು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಇತ್ತೀಚೆಗೆ ತನ್ನ ಹೇಳಿಕೆಯಿಂದ ಪಕ್ಷಕ್ಕೆ ಆಗಿರುವ ಹಾನಿಯನ್ನು ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಈ ವಾರದ ಆರಂಭದಲ್ಲಿ NDTV ಗೆ ನೀಡಿದ ಹೇಳಿಕೆಯೊಂದರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ನರೇಂದ್ರ ಮೋದಿ ಸರಕಾರ ನಿರ್ವಹಿಸುತ್ತಿರುವ ರೀತಿಯನ್ನು ಟೀಕಿಸಿದ್ದರು.
"ಕೆಲಸ ಮಾಡುವವರು ಮಾತ್ರ ತಪ್ಪುಗಳನ್ನು ಮಾಡುತ್ತಾರೆ. ಇತರರಲ್ಲಿ ಕೆಟ್ಟದ್ದನ್ನು ಹುಡುಕುತ್ತಾ ಸಮಯ ಕಳೆಯುವವರ ಜೀವನವು ಅದರಲ್ಲೇ ಕೊನೆಗೊಳ್ಳುತ್ತದೆ" ಎಂದು ಖೇರ್ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿಯನ್ನು ಸದಾ ಕಾಲ ಶ್ಲಾಘಿಸುವ, ಕೇಂದ್ರ ಸರಕಾರದ ಪ್ರಬಲ ಸಮರ್ಥಕನಾಗಿ ಗುರುತಿಸಿಕೊಂಡಿರುವ ಖೇರ್, ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಕೇಂದ್ರ ಸರಕಾರ "ಜಾರಿದೆ" ಎಂದು NDTV ಗೆ ಬುಧವಾರ ತಿಳಿಸಿದ್ದರು.
Next Story