ಸಿಝಡ್‌ಎಂಪಿ ಕರಡು ನಕಾಶೆ ಪ್ರಕಟ: ಆಕ್ಷೇಪಣೆಗೆ ಅವಕಾಶ
ಉಡುಪಿ, ಮೇ 14: ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ಅಧಿ ಸೂಚನೆಯಂತೆ ಚೆನ್ನೈನ ನೇಷನಲ್ ಸೆಂಟರ್ ಫಾರ್ ಸಸ್ಟೈನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ಸಂಸ್ಥೆಯು ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯ (ಸಿಝಡ್‌ಎಂಪಿ) ಕರಡು ನಕಾಶೆಯನ್ನು ತಯಾರಿಸಿದೆ.
ಆದರಂತೆ ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯ ಕರಡು ನಕಾಶೆಯನ್ನು ಸಾರ್ವಜನಿಕರು ಪರಿಶೀಲಿಸಿ ತಕರಾರು ಗಳು, ಸಲಹೆಗಳು ಮತ್ತು ಅನಿಸಿಕೆಗಳೇನಾದರೂ ಇದ್ದಲ್ಲಿ, ಪ್ರಾದೇಶಿಕ ನಿರ್ದೇಶಕರು (ಪರಿಸರ ) ಉಡುಪಿ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆ ಕುರಿತ ಸರಕಾರದ ಅಧಿಸೂಚನೆಗಳು ಹಾಗೂ ಕರಡು ಸಿಝಡ್‌ಎಂಪಿ ನಕಾಶೆಯನ್ನು ಜಿಲ್ಲೆಯ ಸಂಬಂಧಪಟ್ಟ ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





