ಮೇ 31 ರಂದು ಕೇರಳದಲ್ಲಿ ಮುಂಗಾರು ಆರಂಭ: ಐಎಂಡಿ

ಪುಣೆ : ಕೇರಳದಲ್ಲಿ ನೈಋತ್ಯ ಮಾನ್ಸೂನ್ ಮೇ 31 ರಂದು ಆರಂಭವಾಗುವ ನಿರೀಕ್ಷೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಪ್ರಕಟಿಸಿದೆ.
ದಕ್ಷಿಣ ರಾಜ್ಯದಲ್ಲಿಸಾಮಾನ್ಯವಾಗಿ ಮಾನ್ಸೂನ್ ಋತು ಜೂನ್ 1 ರಂದು ಆರಂಭವಾಗುತ್ತದೆ. ಇದು ದೇಶದಾದ್ಯಂತ ನಾಲ್ಕು ತಿಂಗಳ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ.
ಐಎಂಡಿ ಈ ತಿಂಗಳ ಅಂತ್ಯದ ವೇಳೆಗೆ ಎರಡನೇ ಹಂತದ ದೀರ್ಘ ಶ್ರೇಣಿಯ ಮುನ್ಸೂಚನೆಯನ್ನು (ಎಲ್‌ಆರ್‌ಎಫ್) ನೀಡಲಿದೆ. ಇದು ದೇಶದ ಏಕರೂಪದ ಪ್ರದೇಶಗಳಲ್ಲಿ ಮಳೆ ವಿತರಣೆಯನ್ನು ನಿರ್ದಿಷ್ಟಪಡಿಸುತ್ತದೆ.
Next Story