Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಗಾಝಾ: ಮುಂದುವರಿದ ಇಸ್ರೇಲ್ ವಾಯು ದಾಳಿ;...

ಗಾಝಾ: ಮುಂದುವರಿದ ಇಸ್ರೇಲ್ ವಾಯು ದಾಳಿ; 31 ಮಕ್ಕಳು ಸೇರಿ ಕನಿಷ್ಠ 119 ಫೆಲೆಸ್ತೀನೀಯರ ಸಾವು

ದಾಳಿ ಮುಂದುವರಿದರೆ ಟರ್ಕಿ ಸುಮ್ಮನಿರುವುದಿಲ್ಲ:‌ ಅಧ್ಯಕ್ಷ ಎರ್ದೊಗಾನ್

ವಾರ್ತಾಭಾರತಿವಾರ್ತಾಭಾರತಿ14 May 2021 9:03 PM IST
share
ಗಾಝಾ: ಮುಂದುವರಿದ ಇಸ್ರೇಲ್ ವಾಯು ದಾಳಿ; 31 ಮಕ್ಕಳು ಸೇರಿ ಕನಿಷ್ಠ 119 ಫೆಲೆಸ್ತೀನೀಯರ ಸಾವು

ಗಾಝಾ ಪಟ್ಟಿ (ಫೆಲೆಸ್ತೀನ್), ಮೇ 14: ಗಾಝಾ ಪಟ್ಟಿಯ ಮೇಲೆ ನಡೆಸುತ್ತಿರುವ ವಾಯು ದಾಳಿ ಮತ್ತು ಕ್ಷಿಪಣಿ ದಾಳಿಗಳನ್ನು ಇಸ್ರೇಲ್ ಶುಕ್ರವಾರವೂ ಮುಂದುವರಿಸಿದೆ. ಅದೇ ವೇಳೆ, ಆಕ್ರಮಿತ ಗಾಝಾ ಪಟ್ಟಿಯ ಸಮೀಪ ಸೈನಿಕರು ಮತ್ತು ಯುದ್ಧ ಟ್ಯಾಂಕ್ಗಳ ಜಮಾವಣೆಯನ್ನೂ ಅದು ಹೆಚ್ಚಿಸಿದೆ.

ಸೋಮವಾರ ಸಂಘರ್ಷ ಸ್ಫೋಟಗೊಂಡ ಬಳಿಕ 31 ಮಕ್ಕಳು ಸೇರಿದಂತೆ ಕನಿಷ್ಠ 119 ಫೆಲೆಸ್ತೀನೀಯರು ಹತರಾಗಿದ್ದಾರೆ ಹಾಗೂ 830ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ನ ಫಿರಂಗಿ ದಾಳಿಯಿಂದ ರಕ್ಷಣೆ ಪಡೆಯುವುದಕ್ಕಾಗಿ ನೂರಾರು ಫೆಲೆಸ್ತೀನ್ ಕುಟುಂಬಗಳು ಉತ್ತರ ಗಾಝಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಗಳಲ್ಲಿ ಆಶ್ರಯ ಪಡೆದಿವೆ.

ಎಲ್ಲ ಆಕ್ರಮಣಗಳನ್ನು ತಕ್ಷಣ ನಿಲ್ಲಿಸಬೇಕೆಂಬ ಜಾಗತಿಕ ಕರೆಗಳ ಹೊರತಾಗಿಯೂ, ಇಸ್ರೇಲ್ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಕ್ಕಾಗಿ ದಾಳಿ ನಡೆಸುವುದು ಅಗತ್ಯವಾಗಿರುವುದರಿಂದ ಗಾಝಾ ಪಟ್ಟಿಯ ಮೇಲಿನ ದಾಳಿಗಳನ್ನು ಮುಂದುವರಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಶುಕ್ರವಾರ ಮುಂಜಾನೆ ಹಮಾಸ್ ಇಸ್ರೇಲ್ನತ್ತ ಇನ್ನೊಂದು ಸುತ್ತಿನ ರಾಕೆಟ್ ದಾಳಿ ನಡೆಸಿದೆ. ರಾಕೆಟ್ಗಳು ಆಶ್ಕೆಲಾನ್ ನಗರಕ್ಕೆ ಅಪ್ಪಳಿಸಿವೆ. ಈವರೆಗೆ ಹಮಾಸ್ ಇಸ್ರೇಲ್ನತ್ತ ನಡೆಸಿರುವ ದಾಳಿಯಲ್ಲಿ ಕನಿಷ್ಠ ಆರು ಇಸ್ರೇಲಿಗರು ಮತ್ತು ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ.
ಗಾಝಾದಿಂದ ಇಸ್ರೇಲ್ ನ ಹಲವು ಸ್ಥಳಗಳನ್ನು ಗುರಿಯಾಗಿಸಿ ನೂರಾರು ರಾಕೆಟ್ಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಝಾಪಟ್ಟಿಯ ಪೂರ್ವ ಭಾಗದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲಾಗಿದೆ ಎಂದಿದೆ.

ಪಶ್ಚಿಮ ದಂಡೆಯಾದ್ಯಂತ ಪ್ರತಿಭಟನೆ

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಯನ್ನು ಖಂಡಿಸಿ ಆಕ್ರಮಿತ ಪಶ್ಚಿಮ ದಂಡೆಯಾದ್ಯಂತ ಫೆಲೆಸ್ತೀನೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಯಾಬದ್ ಪಟ್ಟಣದ ಗಡಿಠಾಣೆಯೊಂದರಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಓರ್ವ ಫೆಲೆಸ್ತೀನ್ ವ್ಯಕ್ತಿಯನ್ನು ಗುಂಡು ಹಾರಿಸಿ ಕೊಂದವು. ನಬ್ಲುಸ್, ತುಲ್ಕರಿಮ್, ಜೆನಿನ್, ರಮಲ್ಲಾ ಮತ್ತು ಹೆಬ್ರಾನ್ ನಗರಗಳಲ್ಲೂ ಪ್ರತಿಭಟನೆಗಳು ನಡೆದವು. ಜೆರಿಕೊ ನಗರದಲ್ಲಿ ಪೊಲೀಸರ ಗುಂಡಿನ ದಾಳಿಯಲ್ಲಿ 20 ಮಂದಿ ಗಾಯಗೊಂಡರು.

ಟರ್ಕಿ ಸುಮ್ಮನಿರುವುದಿಲ್ಲ: ಎರ್ದೊಗಾನ್


ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ವಾಯು ದಾಳಿಗಳಿಂದ ನಾನು ಆಕ್ರೋಶಿನಾಗಿದ್ದೇನೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶುಕ್ರವಾರ ಹೇಳಿದ್ದಾರೆ ಹಾಗೂ ಹಿಂಸೆಯನ್ನು ಕೊನೆಗೊಳಿಸಲು ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ.
‌
ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ಎಂಬ ಭಯೋತ್ಪಾದಕ ದೇಶ ಪ್ರದರ್ಶಿಸುತ್ತಿರುವ ಕ್ರೌರ್ಯದಿಂದ ನಾವು ಆಕ್ರೋಶ ಮತ್ತು ಬೇಸರಗೊಂಡಿದ್ದೇವೆ ಎಂದು ಆನ್ಲೈನ್ನಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಾ ಅವರು ಹೇಳಿದರು. ಫೆಲೆಸ್ತೀನ್ ನಗರಗಳು ಮತ್ತು ಜೆರುಸಲೇಮ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ವಿರುದ್ಧ ಸೆಟೆದು ನಿಲ್ಲುವುದು ಮಾನವತೆಯ ಪರವಾಗಿ ಮಾಡುತ್ತಿರುವ ಕರ್ತವ್ಯವಾಗಿದೆ ಎಂದರು.

30 ಫೆಲೆಸ್ತೀನಿ ಶಾಲೆಗಳು ಧ್ವಂಸ: 24,000 ಮಕ್ಕಳ ಭವಿಷ್ಯ ಅತಂತ್ರ

ಇಸ್ರೇಲ್ನ ವಾಯು ದಾಳಿಗಳಿಂದ ಗಾಝಾದಲ್ಲಿರುವ ಕನಿಷ್ಠ 31 ಶಾಲೆಗಳು ಮತ್ತು ಒಂದು ಆಸ್ಪತ್ರೆ ಧ್ವಂಸಗೊಂಡಿವೆ ಎಂದು ಸೇವ್ ದ ಚಿಲ್ಡ್ರನ್ ಹೇಳಿದೆ. ಇದರೊಂದಿಗೆ 24,000ಕ್ಕೂ ಅಧಿಕ ಮಕ್ಕಳ ವಿದ್ಯಾಭ್ಯಾಸ ಅನಿಶ್ಚಿತವಾಗಿದೆ. ಹಿಂಸೆಯಿಂದಾಗಿ ಎಲ್ಲಾ ಶಾಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾಮಾಜಿಕ ಸಂಘಟನೆ ಸೇವ್ ದ ಚಿಲ್ಡ್ರನ್ ತಿಳಿಸಿದೆ.

ಭಾರೀ ಪ್ರಮಾಣದ ಶೆಲ್ ದಾಳಿಯು ಸಂಭ್ರಮಾಚರಣೆಯ ಪಟಾಕಿಗಳಾಗಿವೆ ಎಂಬುದಾಗಿ ನಾವು ಮಕ್ಕಳಿಗೆ ಹೇಳಿಕೊಂಡು ಬರುತ್ತಿದ್ದೇವೆ. ಎಂಥ ವಿಪರ್ಯಾಸ! ಈ ಯಾತನಾಮಯ ಪರಿಸ್ಥಿತಿಯಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ನಾವು ಏನೆಲ್ಲಾ ಕಸರತ್ತುಗಳನ್ನು ಮಾಡುತ್ತೇವೆ. ಆದರೆ, ಅವುಗಳೆಲ್ಲವೂ ವ್ಯರ್ಥ ಎಂದು ಸೇವ್ ದ ಚಿಲ್ಡ್ರನ್ನ ಗಾಝಾ ಕ್ಷೇತ್ರ ಉಸ್ತುವಾರಿ ಇಬ್ರಾಹೀಮ್ ಅಬು ಸುಬೀಹ್ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X