ಲಸಿಕೆ ವಿತರಣಾ ಕಾರ್ಯಕ್ರಮದ ಸ್ಥಳ ಬದಲಾವಣೆ : ವೇದವ್ಯಾಸ್ ಕಾಮತ್
ಮಂಗಳೂರು, ಮೇ 14: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಬೇಕಿದ್ದ ಲಸಿಕೆ ವಿತರಣಾ ಕಾರ್ಯಕ್ರಮವನ್ನು ಸ್ಥಳಾವಕಾಶದ ಅಭಾವದಿಂದ ಸ್ಥಳಾಂತರಿಸಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕೆ ವಿತರಣಾ ಶಿಬಿರವನ್ನು ಕಾಪಿಕಾಡ್ ಸರಕಾರಿ ಶಾಲೆಯಲ್ಲಿ, ಶಕ್ತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕೆ ವಿತರಣಾ ಶಿಬಿರವನ್ನು ನಾಲ್ಯಪದವು ಸರಕಾರಿ ಶಾಲೆ, ಪಡೀಲ್ ಆರೋಗ್ಯ ಕೇಂದ್ರದ ಲಸಿಕೆ ವಿತರಣೆಯನ್ನು ಪಡೀಲ್ ಅಮೃತ ಕಾಲೇಜಿನಲ್ಲಿ ಹಾಗೂ ಲೇಡಿಹಿಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕೆ ವಿತರಣೆಯನ್ನು ಗಾಂಧಿನಗರ ಸರಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.
ಜೆಪ್ಪು, ಬಂದರ್, ಎಕ್ಕೂರು, ಬೆಂಗ್ರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳಾವಕಾಶವಿದೆ. ಅಲ್ಲಿಯೇ ಲಸಿಕೆ ವಿತರಣೆ ನಡೆಯಲಿದೆ ಎಂದು ಶಾಸಕರ ಪ್ರಕಟನೆ ತಿಳಿಸಿದೆ.
Next Story





