ಎರಡನೇ ಡೋಸ್ ಕೋವಿಶೀಲ್ಡ್ ತೆಗೆದುಕೊಂಡಿದ್ದ ದಿಲ್ಲಿಯ ಶಸ್ತ್ರಚಿಕಿತ್ಸಾ ತಜ್ಞ ಕೊರೋನದಿಂದ ಸಾವು

ಹೊಸದಿಲ್ಲಿ, ಮೇ 14: ಮಾರ್ಚ್ನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಕೂಡ ಪಡೆದುಕೊಂಡಿದ್ದ ದಿಲ್ಲಿಯ ಶಸ್ತ್ರಚಿಕಿತ್ಸಾ ವೈದ್ಯ ಡಾ. ಅನಿಲ್ ಕುಮಾರ್ ರಾವತ್ (58) ಅವರು ಶುಕ್ರವಾರ ನಿಧನರಾಗಿದ್ದಾರೆ.
ಕೊರೋನ ಸೋಂಕಿತರಾಗಿದ್ದ ಡಾ. ಅನಿಲ್ ಕುಮಾರ್ ರಾವತ್ ಅವರು ಇಲ್ಲಿನ ಸರೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಡಾ. ಅನಿಲ್ ಕುಮಾರ್ ರಾವತ್ ಅವರು ಮಾರ್ಚ್ ಆರಂಭದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು ಎಂದು ಆಸ್ಪತ್ರೆಯ ಮುಖ್ಯ ಆಡಳಿತ ನಿರ್ದೇಶಕ ಡಾ. ಪಿ.ಕೆ. ಭಾರದ್ವಾಜ್ ಹೇಳಿದ್ದಾರೆ.
ರಾವತ್ ಅವರು 1996ರಲ್ಲಿ ಸರೋಜ್ ಆಸ್ಪತ್ರೆಗೆ ಸೇವೆಗೆ ಸೇರಿದ್ದರು. ಕೋವಿಡ್ ಸೋಂಕಿನಿಂದ ಗಂಭೀರವಾಗುವ ವರೆಗೆ ಅವರು ಇದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
Next Story