ಗುಂಡ್ಲುಪೇಟೆ: ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರು ನಿರಾಳ

ಚಾಮರಾಜನಗರ, ಮೇ 15: ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಕಾಡಂಚಿನ ಗ್ರಾಮದಲ್ಲಿ ಚಿರತೆಗಳ ಉಪಟಳ ಅಧಿಕವಾಗಿದ್ದು, ಹೀಗಾಗಿ ಬಂಡೀಪುರ ಅರಣ್ಯಾಧಿಕಾರಿಗಳು ಚಿರತೆ ಉಪಟಳ ಇರುವ ಗ್ರಾಮಗಳಲ್ಲಿ ಚಿರತೆ ಸೆರೆಗೆ ಬೋನುಗಳನ್ನು ಇರಿಸಿದ್ದರು.
ಬೊಮ್ಮನಹಳ್ಳಿ ಗ್ರಾಮದ ಮಹದೇವಪ್ಪರವರ ಜಮೀನಿನಂಚಿನಲ್ಲಿ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಶನಿವಾರ ರಾತ್ರಿ ಪ್ರಾಣಿ ಬೇಟೆಗೆ ಬಂದ ಚಿರತೆ ಬೋನಿಗೆ ಬಿದಿದ್ದೆ . ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನಿನಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟರು.
Next Story





