ಆಕಾಶಭವನ: ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಯ ತರಾಟೆ

ಮಂಗಳೂರು, ಮೇ 15: ಕಾವೂರು 18ನೇ ವಾರ್ಡಿನ ಆಕಾಶಭವನದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ಸಿಬ್ಬಂದಿಯು ಅಕ್ರಮ ಎಸಗಿರುವ ಬಗ್ಗೆ ಗ್ರಾಹಕರು ದೂರು ನೀಡಿದ ಮೇರೆಗೆ ಶಾಸಕ ಭರತ್ ಶೆಟ್ಟಿ ಶನಿವಾರ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಜನರು ಕೊರೋನದಿಂದ ಸಂಕಷ್ಟದಲ್ಲಿರುವ ಸಂದರ್ಭ ಇಂತಹ ಅಪರಾಧಗಳನ್ನು ಸಹಿಸಲು ಸಾಧ್ಯವಿಲ್ಲ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಆದೇಶಿಸಿದರು. ಸ್ಥಳೀಯ ಮನಪಾ ಸದಸ್ಯೆ ಗಾಯತ್ರಿ ರಾವ್ ಜೊತೆಗಿದ್ದರು.
Next Story





