ಅಪರಿಚಿತ ವ್ಯಕ್ತಿ ಮೃತ್ಯು
ಮಂಗಳೂರು, ಮೇ 15: ನಗರದ ಹೊರಬಲಯದ ಉಳ್ಳಾಲ ರೈಲು ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಸುಮಾರು 50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಸುಮಾರು 5.5 ಅಡಿ ಎತ್ತರದ, ಸಾಧಾರಣ ಮೈಕಟ್ಟಿನ, ಎಣ್ಣೆಗೆಂಪು ಮೈಬಣ್ಣದ, ಉದ್ದ ಮುಖ ಹೊಂದಿರುವ ಕುರುಚಲು ಗಡ್ಡ ಮತ್ತು ಮೀಸೆ ಬಿಟ್ಟಿರುವ ಈ ವ್ಯಕ್ತಿಯ ವಾರಸುದಾರರು ಇದ್ದರೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824-2220559)ಯನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ಮನವಿ ಮಾಡಿದ್ದಾರೆ.
Next Story





