ಭಾರೀ ಗಾಳಿ ಮಳೆಗೆ ಕುಸಿದು ಬಿದ್ದ ಮನೆ ಗೋಡೆ: ಅಜ್ಜಿ-ಮೊಮ್ಮಗ ಮೃತ್ಯು
ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ, ಮೇ 16: ಭಾರೀ ಗಾಳಿ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿದು ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ದೊಡ್ಡವ್ವ ರುದ್ರಪ್ಪ ಪಟ್ಟೇದ (55) ಮತ್ತು ಅವರ ಮೊಮ್ಮಗ ಅಭಿಷೇಕ ಸುರೇಶ ಪಟ್ಟೇದ (3) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆಯಲ್ಲಿ ದೊಡ್ಡವ್ವ ಅವರ ಪುತ್ರ ಸುರೇಶ ಹಾಗೂ ಸೊಸೆ ಮಂಜುಳಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿದ ನಂದಗಡ ಠಾಣೆ ಪೊಲೀಸರು ಪರಿಶೀಲಿಸಿದರು.
Next Story