ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದರೂ ಕಾಶ್ಮೀರದಲ್ಲಿ ಕೇವಲ 120 ಮಂದಿಗೆ ಮಾತ್ರ ಲಸಿಕೆ !

ಶ್ರೀನಗರ, ಮೇ 17: ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ 8 ದಿನಗಳಿಂದ ಕೋವಿಡ್ನಿಂದ ತೀವ್ರ ಪೀಡಿತವಾಗಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಶ್ರೀನಗರದಲ್ಲಿ ಆರೋಗ್ಯ ಇಲಾಖೆ ಕೇವಲ 120 ಜನರಿಗೆ ಮಾತ್ರ ಲಸಿಕೆ ನೀಡಿದೆ. ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಒಟ್ಟು 5900 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದೆ ಹಾಗೂ 59 ಮಂದಿ ಸಾವನ್ನಪ್ಪಿದ್ದಾರೆ.
ಮೇ 11ರಂದು 45 ವರ್ಷಕ್ಕಿಂತ ಮೇಲ್ಪಟ್ಟ 120 ಮಂದಿಗೆ ಲಸಿಕೆ ನೀಡಿರುವುದು ಹೊರತುಪಡಿಸಿದರೆ, ಮೇ 9ರಿಂದ 16ರ ನಡುವೆ ಆರೋಗ್ಯ ಇಲಾಖೆ ಲಸಿಕೆ ನೀಡಿಲ್ಲ ಎಂದು ಅಧಿಕೃತ ದತ್ತಾಂಶ ತಿಳಿಸಿದೆ. ಕಳೆದ 8 ದಿನಗಳಲ್ಲಿ ಶ್ರೀನಗರದಲ್ಲಿ 5816 ಕೊರೋನ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಮೇ 9ರಂದು ಅತ್ಯಧಿಕ 920 ಪ್ರಕರಣಗಳು ದಾಖಲಾಗಿದ್ದು, ಮೇ 14ರಂದು ಅತಿ ಕಡಿಮೆ 379 ಪ್ರಕರಣಗಳು ದಾಖಲಾಗಿವೆ. ಜಮ್ಮು ಕಾಶ್ಮೀರದ 20 ಜಿಲ್ಲೆಗಳಲ್ಲಿ ಶ್ರೀನಗರ ಜಿಲ್ಲೆ ಕೊರೋನ ಸೋಂಕಿನಿಂದ ತೀವ್ರ ಪೀಡಿತವಾಗಿದೆ.
Next Story





