ಪ್ರಧಾನಿ ಟೀಕಿಸಿದವರ ವಿರುದ್ಧ ದಾಖಲಿಸಿದ ಎಫ್ಐಆರ್ ರದ್ದತಿ ಕೋರಿ ಸುಪ್ರೀಂಗೆ ಅರ್ಜಿ

ಹೊಸದಿಲ್ಲಿ, ಮೇ 17: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಕೊರೋನ ಸೋಂಕಿನ ನಿರ್ವಹಣೆ ಮತ್ತು ಲಸಿಕೀಕರಣ ನೀತಿಯನ್ನು ಟೀಕಿಸಿ ದಿಲ್ಲಿಯ ವಿವಿಧೆಡೆ ಪೋಸ್ಟರ್ ಅಂಟಿಸಿದ್ದ ಆರೋಪಿಗಳ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಪ್ರಧಾನಿಯನ್ನು ಟೀಕಿಸಿ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿ ಎಫ್ಐಆರ್ ದಾಖಲಿಸಿರುವುದು ವಾಕ್ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಪ್ರದೀಪ್ ಕುಮಾರ್ ಎಂಬವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
‘ಮೋದೀಜಿ, ನಮ್ಮ ಮಕ್ಕಳಿಗೆಂದು ನಿಗದಿಯಾಗಿದ್ದ ಲಸಿಕೆಯನ್ನು ವಿದೇಶಕ್ಕೆ ಯಾಕೆ ಕಳುಹಿಸಿದ್ದೀರಿ’ ಎಂಬ ಬರಹವುಳ್ಳ ಸುಮಾರು 800ಕ್ಕೂ ಅಧಿಕ ಪೋಸ್ಟರ್ಗಳು ಕಳೆದ ಕೆಲ ದಿನಗಳಿಂದ ದಿಲ್ಲಿಯ ವಿವಿಧೆಡೆ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ಬಂಧಿಸಲಾಗಿದ್ದು ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
Next Story





