ಉಪ್ಪಿನಂಗಡಿ : ವಿಎಚ್‍ಪಿ, ಬಜರಂಗದಳದಿಂದ ರಕ್ತದಾನ

ಉಪ್ಪಿನಂಗಡಿ: ಕೋವಿಡ್- 19ನಿಂದಾಗಿ ರಕ್ತದಾನ ಮಾಡುವವರ ಸಂಖ್ಯೆ ಇಳಿಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ಉಪ್ಪಿನಂಗಡಿ ಘಟಕದ ಸದಸ್ಯರು ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದಾನ ಮಾಡಿದರು.
ಘಟಕದ ಸಂಚಾಲಕ ಚಿದಾನಂದ ಪಂಚೇರು ಅವರ ನೇತೃತ್ವದಲ್ಲಿ ಸದಸ್ಯರಾದ ಸುಜೀತ್ ಬೊಳ್ಳಾವು, ಮೂಲಚಂದ್ರ ಕಾಂಚನ, ಕರುಣಾಕರ ಉಪ್ಪಿನಂಗಡಿ, ಸಚಿನ್ ಬೊಳ್ಳಾವು, ರಕ್ಷಿತ್ ಪೆರಿಯಡ್ಕ, ದುರ್ಗಾಪ್ರಸಾದ್ ಪೆರಿಯಡ್ಕ, ಜಯರಾಮ ಅಂಡೆತ್ತಡ್ಕ, ರಾಜೇಶ್ ಕೊಡಂಗೆ, ನವೀನ್ ಹಿರೇಬಂಡಾಡಿ, ರೋಹಿತ್ ಪೆರಿಯಡ್ಕ, ರಾಜೇಶ್ ಪಾಡೆಂಕಿ, ಸಂದೀಪ್ ಕುಪ್ಪೆಟ್ಟಿ, ರವೀಂದ್ರ ಪಿಲಿಬೈಲ್, ನವೀನ್ ಪೆರಿಯಡ್ಕ, ನಿತಿನ್ ಅಣ್ಣಾಜೆ, ನಿಶಾಂತ್ ಪೆರಿಯಡ್ಕ ಪುತ್ತೂರಿಗೆ ತೆರಳಿ ರಕ್ತದಾನ ಮಾಡಿದರು ಎಂದು ಪ್ರಕಟನೆ ತಿಳಿಸಿದೆ.
Next Story





