10 ಸಾವಿರ ಟನ್ ಆಮ್ಲಜಕ ಸಾಗಿಸಿ ಮೈಲುಗಲ್ಲು ತಲುಪಿದ ರೈಲ್ವೆ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಮೇ 17: ಹತ್ತು ಸಾವಿರ ಟನ್ಗಳು ದ್ರವ ವೈದ್ಯಕೀಯ ಆಮ್ಲನಜಕವನ್ನು ಸೋಮವಾರ ಸಾಗಿಸುವ ಮೂಲಕ ರೈಲ್ವೆ ಮೈಲುಗಲ್ಲು ತಲುಪಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ. ಆಮ್ಲಜನಕ ಸಾಗಿಸುವ ಸೇವೆಯನ್ನು ರೈಲ್ವೆ ಮುಂಬೈಯಿಂದ ಎಪ್ರಿಲ್ 19ರಂದು ಆರಂಭಿಸಿತು. ಅದು ಈಗ 13 ರಾಜ್ಯಗಳನ್ನು ಒಳಗೊಂಡಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್ ನಲ್ಲಿ ಸೋಮವಾರ ಬೆಳಗ್ಗೆ 10 ಸಾವಿರ ಟನ್ ದ್ರವ ಆಮ್ಲಜನಕನವನ್ನು ಸಾಗಿಸುವ ಮೂಲಕ ನಾವು ಮೈಲುಗಲ್ಲು ತಲುಪಿದ್ದೇವೆ. ಆಕ್ಸಿಜನ್ ಎಕ್ಸ್ಪ್ರೆಸ್ 13 ರಾಜ್ಯಗಳಿಗೆ ಆಮ್ಲಜನಕ ಪೂರೈಸಿದೆ ಎಂದು ಶರ್ಮಾ ಹೇಳಿದ್ದಾರೆ. ಪಶ್ಚಿಮ ರೈಲ್ವೆ ರವಿವಾರ 137 ಟನ್ ಹಾಗೂ ಸೋಮವಾರ 151 ಟನ್ ಆಮ್ಲಜನಕವನ್ನು ಗುಜರಾತ್ನಿಂದ ದೇಶದ ವಿವಿಧ ಭಾಗಗಳಿಗೆ ಸಾಗಾಟ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ರೈಲ್ವೆ ಎಪ್ರಿಲ್ 25ರಿಂದ ಆಮ್ಲಜನಕದ ಟ್ಯಾಂಕರ್ಗಳನ್ನು ಸಾಗಿಸಲು ಆರಂಭಿಸಿದೆ. ಅದು ಪ್ರತಿದಿನ ಸರಾಸರಿ 134 ಟನ್ಗಳಷ್ಟು ಆಮ್ಲಜನಕವನ್ನು ಸಾಗಿಸಿದೆ ಎಂದು ಅವರು ತಿಳಿಸಿದ್ದಾರೆ.
Next Story





