ಭಾರತದಲ್ಲಿ ಜನರ ಹಿತಾಸಕ್ತಿ ಬಲಿಕೊಟ್ಟು ಎಂದಿಗೂ ಲಸಿಕೆಗಳನ್ನು ರಫ್ತು ಮಾಡಿಲ್ಲ: ಅದಾರ್ ಪೂನಾವಾಲಾ

ಹೊಸದಿಲ್ಲಿ: "ಭಾರತದ ಜನರ ಹಿತಾಸಕ್ತಿ ಬಲಿಕೊಟ್ಟು ಲಸಿಕೆಗಳನ್ನು ರಫ್ತು ಮಾಡಿಲ್ಲ. ಭಾರತದ ವ್ಯಾಕ್ಸಿನೇಷನ್ ಅಭಿಯಾನವನ್ನು ಎರಡು ಅಥವಾ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ’’ ಎಂದು ಕೋವಿಶೀಲ್ಡ್ ಲಸಿಕೆ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದಾರ್ ಪೂನವಾಲಾ ಇಂದು ಹೇಳಿದ್ದಾರೆ.
ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಿದ ಸಂದರ್ಭಗಳು ಹಾಗೂ ಸರಕಾರವು ವ್ಯಕ್ತಪಡಿಸಿದ ಬದ್ಧತೆಗಳನ್ನು ಸಹ ಪೂನವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story