ಕತರ್ ಬಾವಾ ಹಾಜಿ ಕೆದುಂಬಾಡಿ

ಉಳ್ಳಾಲ : ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಅಧ್ಯಕ್ಷ, ಕಾರ್ಯದರ್ಶಿಯಾಗಿ ಅಪಾರ ಸೇವೆ ಸಲ್ಲಿಸಿದ ಕತರ್ ಬಾವಾ ಹಾಜಿ ಕೆದುಂಬಾಡಿ (54) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.
ಎಸ್ ಎಂಎ ಮಂಜನಾಡಿ ರೀಜನಲ್, ಉಳ್ಳಾಲ ಝೋನಲ್, ದ.ಕ.ಜಿಲ್ಲಾ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಎಸ್ ಎಂಎ ರಾಜ್ಯ ಉಪಾಧ್ಯಕ್ಷರಾಗಿದ್ದರು. ಕೆದುಂಬಾಡಿ ಜುಮ್ಮಾ ಮಸೀದಿ ಅಧ್ಯಕ್ಷರಾಗಿ , ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲ ಕಾಲ ಸೇವೆ ನೀಡಿದ್ದರು.
ಮೃತರು ಪತ್ನಿ ,ಒಂದು ಗಂಡು, ಒಂದು ಹೆಣ್ಣು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಂತಾಪ : ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ಉಜಿರೆ,ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್ ,ಎಸ್ ಪಿ ಹಂಝ ಸಖಾಫಿ,ಜಿ.ಎಂ ಕಾಮಿಲ್ ಸಖಾಫಿ, ಶಾಫಿ ಸಅದಿ ಬೆಂಗಳೂರು,ಡಾ.ಝೈನಿ ಕಾಮಿಲ್, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಸಿದ್ದೀಕ್ ಮೋಂಟುಗೋಳಿ,ಕೆ.ಕೆ.ಎಂ.ಕಾಮೀಲ್ ಸಖಾಫಿ, ಉಸ್ಮಾನ್ ಸ ಅದಿ ಪಟ್ಟೋರಿ, ಹಮೀದ್ ಹಾಜಿ ಕೊಡುಂಗೈ, ಟಿ.ಎಂ. ಮಹಮ್ಮದ್ ಮದನಿ, ಯೂಸುಫ್ ಹಾಜಿ ಉಪ್ಪಳ್ಳಿ, ಓ.ಕೆ.ಸಈದ್ ಮುಸ್ಲಿಯಾರ್, ಇಬ್ರಾಹಿಂ ನಯೀಮಿ, ಎ.ಪಿ.ಇಸ್ಮಾಯಿಲ್ ಅಡ್ಯಾರ್ ಪದವು, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಮುನೀರ್ ಸಖಾಫಿ, ರಶೀದ್ ಸಖಾಫಿ, ಇಕ್ಬಾಲ್ ಕೃಷ್ಣಾಪುರ, ಮುಮ್ತಾಝ್ಜ್ ಅಲಿ, ಮುಹಮ್ಮದ್ ಅಲಿ ಸಖಾಫಿ, ಅಶ್ರಫ್ ಕಿನಾರ, ಅಬ್ದುಲ್ ಲತೀಫ್ ಸಖಾಫಿ ಶಿವಮೊಗ್ಗ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಹನೀಫ್ ಹಾಜಿ ಉಳ್ಳಾಲ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಅಲಿ ಕುಂಞಿ ಪಾರೆ,ಟಿ.ಎಸ್. ಅಬ್ದುಲ್ಲ ಸಾಮಣಿಗೆ, ಇಬ್ರಾಹಿಂ ಸಖಾಫಿ ಪುಂಡೂರು,ಮುಹಮ್ಮದ್ ಮದನಿ , ಶಾಫಿ ಮದನಿ ಕರಾಯ ಸಂತಾಪ ಸೂಚಿಸಿದ್ದಾರೆ.







