ಭಟ್ಕಳ: ಹಾವು ಕಡಿದು ಮಹಿಳೆ ಮೃತ್ಯು
ಭಟ್ಕಳ: ತಾಲೂಕಿನ ಬ್ಯೆಲೂರು ಗ್ರಾಮದ ನೀರಗದ್ದೆಯಲ್ಲಿ ವಿಷದ ಹಾವು ಕಚ್ಚಿ ಮಹಿಳೆಯೊರ್ವಳು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ಮಹಿಳೆಯನ್ನು ಜಾನಕಿ ರಮೇಶ ನಾಯ್ಕ (37) ಎಂದು ಗುರುತಿಸಲಾಗಿದೆ.
ಮಹಿಳೆಯು ಗದ್ದೆ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದ್ದು ತಕ್ಷಣ ಆಕೆಯನ್ನು ಮುರುಡೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಆಕೆಯನ್ನು ಭಟ್ಕಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ಮಾರ್ಗದ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
Next Story





