ಕೋವಿಡ್ ನಿಂದ ಚೇತರಿಸಿಕೊಂಡ 3 ತಿಂಗಳ ನಂತರ ಲಸಿಕೆ ತೆಗೆದುಕೊಳ್ಳಬಹುದು: ಕೇಂದ್ರ ಸರಕಾರ

ಹೊಸದಿಲ್ಲಿ: ಕೋವಿಡ್ ನಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಕೊರೋನವೈರಸ್ ವಿರುದ್ಧದ ಲಸಿಕೆ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ.
ಮೊದಲ ಡೋಸ್ ಬಳಿಕ ಕೊರೋನ ಸೋಂಕಿಗೆ ಒಳಗಾದವರು ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಮೂರು ತಿಂಗಳ ನಂತರವೇ ತೆಗೆದುಕೊಳ್ಳಬೇಕು. ಇಲ್ಲಿಯವರೆಗೆ, ಅಂತಹ ಸಂದರ್ಭಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಯಾವುದೇ ಸ್ಥಿರ ಅಂತರವಿರಲಿಲ್ಲ. ವೈಯಕ್ತಿಕ ವೈದ್ಯರು ರೋಗಿಯ ಸ್ಥಿತಿಯನ್ನು ಅವಲಂಬಿಸಿ ಎರಡು ಅಥವಾ ನಾಲ್ಕು ವಾರಗಳ ಅಂತರವನ್ನು ಶಿಫಾರಸು ಮಾಡುತ್ತಾರೆ.
ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಹಾಕಲು ಹೊಸ ತಜ್ಞರ ಗುಂಪು ಶಿಫಾರಸು ಮಾಡಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಆರ ರಿಂದ ಎಂಟು ವಾರಗಳಿಂದ 12 ರಿಂದ 16 ವಾರಗಳಿಗೆ ಸರಕಾರ ವಿಸ್ತರಿಸಿದ ನಂತರ ಈ ಬದಲಾವಣೆಗಳು ಲಸಿಕೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಿವೆ ಎಂದು ಸರಕಾರ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story