ಗಾಯಕ ಅರಿಜಿತ್ ಸಿಂಗ್ ಅವರ ತಾಯಿ ಕೋವಿಡ್ -19 ರಿಂದ ನಿಧನ

ಹೊಸದಿಲ್ಲಿ: ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಅರಿಜಿತ್ ಸಿಂಗ್ ಅವರ ತಾಯಿ ಇಂದು (ಮೇ 20) ನಿಧನರಾದರು.
ಕೋವಿಡ್ ಪಾಸಿಟಿವ್ ದೃಢಪಟ್ಟ ನಂತರ ಸಿಂಗ್ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಇಂದು ಬೆಳಿಗ್ಗೆ 11 ರ ಸುಮಾರಿಗೆ ಕೊನೆಯುಸಿರೆಳೆದರು.
ಸಿಂಗ್ ಅವರ ತಾಯಿ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನು ನಟಿ ಸ್ವಸ್ತಿಕಾ ಮುಖರ್ಜಿ ಹಾಗೂ ಚಲನಚಿತ್ರ ನಿರ್ಮಾಪಕ ಶ್ರೀಜಿತ್ ಮುಖರ್ಜಿ ಅವರು ಕೆಲವು ದಿನಗಳ ಹಿಂದೆ ಹಂಚಿಕೊಂಡಿದ್ದರು. ಗಾಯಕನ ತಾಯಿಗೆ ಎ ನೆಗೆಟಿವ್ ರಕ್ತ ದಾನ ನೀಡುವ ಅವಶ್ಯಕತೆಯಿದೆ ಎಂದು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದರು.
ಅರಿಜಿತ್ ಸಿಂಗ್ ಅವರು ಆಶಿಕಿ- 2 ಚಿತ್ರದಲ್ಲಿ ಹಾಡಿದ್ದ ‘ತುಮ್ ಹಿ ಹೋ’ ಹಾಡು ಭಾರೀ ಹಿಟ್ ಆದ ನಂತರ ಸಿಂಗ್ ಮನೆ ಮಾತಾಗಿದ್ದರು.
Next Story





