ವೈದ್ಯಕೀಯ ಸೌಲಭ್ಯ ಒದಗಿಸದ ಕಾಂಗ್ರೆಸ್‌ನಿಂದ ಮೋದಿ ಟೀಕೆ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು, ಮೇ 20: ದೇಶದಲ್ಲಿ 73 ವರ್ಷ ಕಾಲ ಆಡಳಿತದ ನಡೆಸಿದ ಕಾಂಗ್ರೆಸ್, ದೇಶದ ಜನಸಂಖ್ಯೆಗೆ ಅಗತ್ಯವಿರುವಷ್ಟು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಲ್ಲ. ಹಾಗಾಗಿಯೇ ಚೀನಾದ ಕಮ್ಯುನಿಸ್ಟ್ ಪಕ್ಷ ಜೊತೆ ಕಾಂಗ್ರೆಸ್ ಒಡಂಬಡಿಕೆ ಮಾಡಿಕೊಂಡ ಕಾರಣ ಚೀನಾವನ್ನು ಟೀಕಿಸುತ್ತಿಲ್ಲ. ಇದರ ಬದಲು ಕೋವಿಡ್ 2ನೇ ಅಲೆಗೆ ಭಾರತ/ ಪ್ರಧಾನಿ ಮೋದಿಯೇ ಕಾರಣ ಎಂದು ಆರೋಪಿಸುತ್ತಿದೆ ಎಂದುರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ದೂರದರ್ಶಿತ್ವ ಹಾಗೂ ನಾಯಕತ್ವದಿಂದ ಜಗತ್ತಿನ ರಾಷ್ಟ್ರಗಳು ಭಾರತಕ್ಕೆ ಬೇಕಾದ ಎಲ್ಲ ರೀತಿಯ ಔಷಧೀಯ ಹಾಗೂ ಲಸಿಕೆ ಸೌಲಭ್ಯವನ್ನು ರವಾನಿಸಲು ಮುಂದೆ ಬಂದಿವೆ ಎಂದು ಕ್ಯಾ.ಕಾರ್ಣಿಕ್ ಹೇಳಿದರು.
ಅವಕಾಶವಾದಿ ರಾಜಕಾರಣಕ್ಕಾಗಿ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಉಂಟುಮಾಡಲು ಷಡ್ಯಂತರ ರೂಪಿಸಿದ ಭಾಗವೇ ಟೂಲ್ ಕಿಟ್. ಈ ಬಗ್ಗೆ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆದು ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಹೇಳಿದರು.
ಕೋವಿಡ್‌ನ ಈ ಸಂಕಷ್ಟ ಸಮಯದಲ್ಲಿ ಸಂತ್ರಸತಿರಿಗೆ ನೆರವಾಗುವ ಬದಲು ದೇಶದಲ್ಲಿ ಆಂತರಿಕ ಹಾಗೂ ಭಯದ ವಾತಾವರಣ ಸೃಷ್ಟಿ ಮಾಡಲು ಹೊರಟಿರುವುದು ಖಂಡನೀಯ. ಕಳೆದ ಆರು ತಿಂಗಳಿಂದ ಕಾಂಗ್ರೆಸ್‌ನ ಮನಸ್ಥಿತಿ ಅಧಿಕಾರ ಇಲ್ಲದೆ ಬದಲಾಗಿದ್ದು, ಟೂಲ್ ಕಿಟ್‌ನಂತೆ ಅದರ ಇಕೋ ಸಿಸ್ಟಮ್ ಕೂಡ ಕೆಲಸ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಕಾಂಗ್ರೆಸ್‌ನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೋವಿಡ್ ಸಂದರ್ಭದಲ್ಲಿ ತಮ್ಮ ಕ್ಷೇತ್ರಗಳಿಗೆ ತೆರಳದೆ, ಬೆಂಗಳೂರಲ್ಲೇ ಕೂತು ಇಂತಹ ಕಾರ್ಯತಂತ್ರ ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕೋವಿಡ್ ಕೇರ್ ನಿಧಿಗೆ 100 ಕೋಟಿ ರೂ. ನೀಡುವುದಾಗಿ ಕಾಂಗ್ರೆಸ್ ನಾಯಕರು ಬೊಗಳೆ ಬಿಟ್ಟಿದ್ದಾರೆ. ಈಗಾಗಲೇ ಸಂಸದರ ನಿಧಿಯನ್ನು ಕೋವಿಡ್‌ಗೆ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಸಿಎಂ ಕೂಡ ಪ್ರದೇಶಾಭಿವೃದ್ಧಿ ನಿಧಿ ನೀಡುವಂತೆ ಎಲ್ಲ ಶಾಸಕರಿಗೆ ವಿನಂತಿಸಿ ದ್ದಾರೆ. ಅದನ್ನೇ ಕಾಂಗ್ರೆಸ್ ನಾಯಕರು ಹೇಳಿದ್ದಾರೆಯೇ ಹೊರತು ಅವರ ಪಕ್ಷದ ಮೊತ್ತ ನೀಡುತ್ತಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಕಾಂಗ್ರೆಸಿಗರು ಜನತೆಯ ಹಾದಿತಪ್ಪಿಸುತ್ತಿದ್ದಾರೆ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಆರೋಪಿಸಿದರು.
ಮುಖಂಡರಾದ ರವಿಶಂಕರ ಮಿಜಾರ್, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೇಣವ, ರಾಧಾಕೃಷ್ಣ, ರಣದೀಪ್ ಕಾಂಚನ್ ಇದ್ದರು.
ಸಿಎಂ ಬದಲಾವಣೆ ಪ್ರಶ್ನೆ ಇಲ್ಲ
ರಾಜ್ಯದಲ್ಲಿ ಸಿಎಂ ಬದಲಾವಣೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದ ಕೇಳಿಬರುತ್ತಲೇ ಇದೆ. ಹಾಗೆಂದು ರಾಜ್ಯ ಅಥವಾ ಕೇಂದ್ರ ನಾಯಕತ್ವ ಎಲ್ಲಿಯೂ ಸಿಎಂ ಬದಲಾವಣೆ ಮಾಡುತ್ತದೆ ಎಂದು ಹೇಳಿಲ್ಲ, ಅಂತಹ ಅನಿವಾರ್ಯತೆಯೂ ಈಗ ಇಲ್ಲ ಎಂದು ಬಿಜೆಪಿ ಕ್ಯಾ.ಗಣೇಶ್ ಕಾರ್ಣಿಕ್ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.







