ಉದ್ಯಮಿಗೆ ಜೀವ ಬೆದರಿಕೆ ಆರೋಪ: ದೂರು
ಮಂಗಳೂರು, ಮೇ 20: ವ್ಯವಹಾರದ ಬಾಕಿ ಹಣ ಕೇಳಲು ಹೋದ ಉದ್ಯಮಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾವನಾ ಮಾಲಿ ಎಂಬವರು ನಗರದಲ್ಲಿ ಮಹಾಲಕ್ಷ್ಮಿ ಮಾರ್ಕೆಟಿಂಗ್ ಹಾರ್ಡ್‌ವೇರ್ ಉದ್ಯಮ ನಡೆಸಿಕೊಂಡು ಬರುತ್ತಿದ್ದು, ಆರೋಪಿ ಭರತ್ ಕುಮಾರ್ ಎಂಬಾತನು ಗುತ್ತಿಗೆ ಆಧಾರದ ಮೇಲೆ ಭಾವನಾ ಮಾಲಿ ಸಂಸ್ಥೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ 3 ತಿಂಗಳಿನಿಂದ ಆರೋಪಿ ಭರತ್ ಕುಮಾರ್ ವೈಯಕ್ತಿಕವಾಗಿ ವ್ಯವಹರಿಸಿ ಭಾವನಾರಿಗೆ ಬರಬೇಕಾದ ಸುಮಾರು 2 ಲಕ್ಷ ರೂ,ವನ್ನು ದುರು ಪಯೋಗಪಡಿಸಿಕೊಂಡಿದ್ದ ಎಂದು ಆಪಾದಿಸಲಾಗಿದೆ.
ತನಗೆ ಬರಬೇಕಾದ ಬಾಕಿ ಹಣವನ್ನು ಕೇಳಲು ಭಾವನಾ ಹೋದಾಗ ‘ನೀವು ಮಾಡುವುದನ್ನು ಮಾಡಿ, ಹಣ ಕೊಡುವುದಿಲ್ಲ, ಹಣ ಕೇಳಲು ಬಂದರೆ ಜೀವ ಸಹಿತ ಬಿಡುವುದಿಲ್ಲ’ ಎಂದು ಭರತ್ ಕುಮಾರ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





