18ರಿಂದ 44 ವರ್ಷ ಒಳಗಿನವರಿಗೆ ಕೋವಿಡ್ ಲಸಿಕೆ ಮೇ 22ರಿಂದ ಪ್ರಾರಂಭ

ಬೆಂಗಳೂರು, ಮೇ 20: 18 ರಿಂದ 44 ವರ್ಷದೊಳಗಿನವರಿಗೆ ರಾಜ್ಯ ಗುರುತಿಸಿರುವ ಕೊರೋನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯನ್ನು ಮೇ 22ರಿಂದ ಪ್ರಾರಂಭಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಸೂಚನೆ ನೀಡಿದೆ.
18 ರಿಂದ 44 ವರ್ಷದ ಫಲಾನುಭವಿಗಳಿಗೆ ಕೊರೋನ ಲಸಿಕೆಗಳನ್ನು ರಾಜ್ಯ ಸರಕಾರ ಖರೀದಿಸಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಅನುಷ್ಠಾನಾಧಿಕಾರಿಗಳು ಆಗಿರುತ್ತಾರೆ.
ಕೋವಿಡ್-19 ಲಸಿಕಾಕರಣ ಎಲ್ಲ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಸೂಚನೆ ನೀಡಿದೆ.
Next Story





