ಕೊರೋನ ಮುಕ್ತ ಗ್ರಾಮಕ್ಕಾಗಿ ಸದಸ್ಯರಿಗೆ ವಾರ್ಡ್ ಗಳ ಜವಾಬ್ದಾರಿ ನೀಡಿ: ಯು.ಟಿ.ಖಾದರ್ ಸಲಹೆ
ಪುದು ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆ

ಬಂಟ್ವಾಳ, ಮೇ 20: ಗ್ರಾಮ ಪಂಚಾಯತ್ ಸದಸ್ಯರಿಗೆ ಪ್ರತಿ ವಾರ್ಡ್ ಗಳ ಜವಾಬ್ದಾರಿ ನೀಡಿ ಅವರು ಆಯಾಯ ವಾರ್ಡ್ ಗಳಲ್ಲಿ ನಿಯಂತ್ರಣದ ಕಾರ್ಯ ಮಾಡಿದಾಗ ಪುದು ಗ್ರಾಮವನ್ನು ಕೊರೋನ ಮುಕ್ತಗೊಳಿಸಬೇಕು ಎಂದು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಗುರುವಾರ ಸುಜೀರ್ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಪುದು ಗ್ರಾಮ ಪಂಚಾಯತ್ ನ ಕೊರೋನ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕೊರೋನ ಪ್ರಕರಣಗಳನ್ನು ಸೊನ್ನೆಗೆ ತರುವುದು ಕಾರ್ಯಪಡೆಯ ಆದ್ಯತೆಯಾಗಬೇಕು. ಬಂದಾಗ ನೋಡುವ ಬದಲು ಈಗಲೇ ಎಚ್ಚರಿಕೆ ವಹಿಸುವುದು ಅತಿ ಅಗತ್ಯ. ನಿಮ್ಮ ಸಮಸ್ಯೆಗಳು, ಸಲಹೆಗಳನ್ನು ಹೇಳಿದಾಗ ಕೊರೋನ ನಿಯಂತ್ರಣಕ್ಕೆ ನೆರವಾಗಲಿದೆ ಎಂದರು.
ಗ್ರಾಮಕ್ಕೆ ಆ್ಯಂಬುಲೆನ್ಸ್ ನೀಡುವಂತೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಶಾಸಕರಿಗೆ ಬೇಡಿಕೆ ಸಲ್ಲಿಸಿದರು. ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ. ಅವರು ಕಾರ್ಯಪಡೆಯ ಕಾರ್ಯವೈಖರಿಯನ್ನು ತಿಳಿಸಿದರು.
ಪಾಸಿಟಿವ್ ಕಂಡುಬಂದ ಮನೆಗಳಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಕಿಟ್ ವಿತರಣೆಯ ಕಾರ್ಯ ಮಾಡಿದ್ದೇವೆ ಎಂದು ಅವರು ತಿಳಿಸಿದರು. ಪುದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುದರ್ಶನ್ ಅವರು ಗ್ರಾಮದ ಕೊರೊನಾ ಪ್ರಕರಣಗಳ ವಿವರ, ಲಸಿಕೆ ಹಂಚಿಕೆ, ನಿಯಂತ್ರಣ ಕ್ರಮಗಳ ಕುರಿತು ತಿಳಿಸಿದರು.
ತಹಶೀಲ್ದಾರ್ ರಶ್ಮಿ ಎಸ್.ಆರ್., ಬಂಟ್ವಾಳ ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ, ನೋಡೆಲ್ ಅಧಿಕಾರಿ ಬಿಇಒ ಜ್ಞಾನೇಶ್ ಎಂ.ಪಿ., ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ, ಗ್ರಾಮ ಪಂಚಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಗ್ರಾ.ಪಂ. ಪ್ರಕಾಶ್ ಚಂದ್ರ ರೈ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಗ್ರಾಮಕರಣಿಕೆ ನವ್ಯಾ ಎನ್.ಎಸ್., ಪುದು ಗ್ರಾ.ಪಂ. ಪಿಡಿಒ ಹರೀಸ್ ಕೆ., ಎಸ್ಕೆಎಸ್ಸೆಸ್ಸೆಫ್ ವಿಖಾಯ ಪುದು ವಲಯಾಧ್ಯಕ್ಷ ಇಮ್ರಾನ್ ಮಾರಿಪಳ್ಳ, ಪಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲ್, ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಲತೀಫ್ ಮಲಾರ್, ಎಸ್ಸೆಸ್ಸೆಫ್ ವಲಯಾಧ್ಯಕ್ಷ ನಝೀರ್ ಪೇರಿಮಾರ್, ಬಿ.ಎಂ.ತುಂಬೆ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಫೀಕ್ ಪೇರಿಮಾರ್, ಸಾಮಾಜಿಕ ಕಾರ್ಯಕರ್ತರಾದ ಹಕೀಂ ಉರ್ವ, ಫಯಾಝ್ ಮಾರಿಪಳ್ಳ ಹಾಗೂ ಗ್ರಾ.ಪಂ. ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.







