ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್ ಪಾಲ್ ಅತ್ಯಾಚಾರ ಆರೋಪದಿಂದ ಖುಲಾಸೆ

ಪಣಜಿ: ತೆಹಲ್ಕಾ ನಿಯತಕಾಲಿಕದ ಸಂಸ್ಥಾಪಕ ಹಾಗೂ ಮಾಜಿ ಮುಖ್ಯ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಶುಕ್ರವಾರ ಗೋವಾದ ಮಾಪುಸಾ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ಅತ್ಯಾಚಾರ ಆರೋಪದಿಂದ ಖುಲಾಸೆಗೊಳಿಸಿದೆ.
2013 ರಲ್ಲಿ ಗೋವಾದ ಪಂಚತಾರಾ ರೆಸಾರ್ಟ್‌ನಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಗೋವಾ ಕ್ರೈಮ್ ಬ್ರ್ಯಾಂಚ್ 2013ರ ಮೇ 30ರಂದು ತೇಜ್ ಪಾಲ್ ರನ್ನು ಬಂಧಿಸಿತ್ತು. 2014ರ ಜುಲೈ 1ರಂದು ಸುಪ್ರೀಂಕೋರ್ಟ್ ತೇಜ್ ಪಾಲ್ ಗೆ ಜಾಮೀನು ನೀಡಿತ್ತು. 2014ರ ಫೆಬ್ರವರಿಯಲ್ಲಿ ಗೋವಾ ಕ್ರೈಮ್ ಬ್ರ್ಯಾಂಚ್ ತೇಜ್ ಪಾಲ್ ವಿರುದ್ದ 2,846 ಪುಟಗಳ ಚಾರ್ಜ್ ಶೀಟನ್ನು ಸಲ್ಲಿಸಿತ್ತು.
2017 ರಲ್ಲಿ ಪತ್ರಕರ್ತ ತರುಣ್ ತೇಜ್ ಪಾಲ್ ವಿರುದ್ಧ ನ್ಯಾಯಾಲಯವು ಅತ್ಯಾಚಾರ, ಲೈಂಗಿಕ ಕಿರುಕುಳ ಆರೋಪ ಹೊರಿಸಿತ್ತು. ತರುಣ್ ತೇಜ್‌ಪಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಆರೋಪಗಳನ್ನು ಪ್ರಶ್ನಿಸಿದರು, ಗೋವಾದಲ್ಲಿ ವಿಚಾರಣೆಯನ್ನು ಆರು ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.