ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ಮದುವೆಯಲ್ಲಿ ಭಾಗಿಯಾದವರನ್ನು ʼಕಪ್ಪೆ ಕುಣಿತʼ ಮಾಡಿಸಿದ ಪೊಲೀಸರು

ಭಿಂದ್: ಸರಕಾರ ಸೂಚಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೇ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ 35 ಮಂದಿ ಅತಿಥಿಗಳನ್ನು ಪೊಲೀಸರು ರಸ್ತೆಯಲ್ಲಿ ʼಕಪ್ಪೆ ಕುಣಿತʼ ಮಾಡಿಸಿರುವ ಘಟನೆ ವರದಿಯಾಗಿದೆ ಈ ಕುರಿತಾದಂತೆ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ಮಕ್ಕಳು ಮತ್ತು ಹಿರಿಯರನ್ನೂ ಶಿಕ್ಷೆಗೆ ಒಳಪಡಿಸಿರುವುದರ ಕುರಿತು ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
35 ಮಂದಿ ಮದುವೆ ಕಾರ್ಯಕ್ರಮ ಮುಗಿಸಿ ಟ್ರ್ಯಾಕ್ಟರ್ ಟ್ರೋಲಿಯೊಂದರಲ್ಲಿ ಕುಳಿತು ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಯಾರೂ ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರ ಪಾಲಿಸಿರಲಿಲ್ಲ ಎನ್ನಲಾಗಿದೆ. ಈ ವೇಳೆ ಪೊಲೀಸರು ಅವರೆಲ್ಲರನ್ನೂ ಕೆಳಗಿಳಿಸಿ ರಸ್ತೆಯಲ್ಲೇ ಕಪ್ಪೆ ಕುಣಿತ ಮಾಡಿಸಿದ್ದಾರೆ. ಪೊಲೀಸರು ಲಾಠಿ ಹಿಡಿದುಕೊಂಡು ಬೆದರಿಸುತ್ತಿರುವ ದೃಶ್ಯಗಳನ್ನೂ ವೀಡಿಯೋದಲ್ಲಿ ಕಾಣಬಹುದಾಗಿದೆ.
ಇವರ ವಿರುದ್ಧ ಬೇರೆ ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.
In Bhind "Baaratis" were made to do ‘Frog Jump’ for violating #CovidIndia-19 restrictions. The wedding was being organized, in violation of the lockdown restriction enforced in Bhind @ndtv @ndtvindia @GargiRawat @manishndtv pic.twitter.com/QftxjTsFvL
— Anurag Dwary (@Anurag_Dwary) May 20, 2021







