ಜಾರಿಗೆ ತರಲು ಸಾಧ್ಯವಿರುವ ಆದೇಶಗಳನ್ನು ಮಾತ್ರ ಹೈಕೋರ್ಟ್ ಗಳು ನೀಡಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕೋವಿಡ್ ಸಂಬಂಧಿತ ಪ್ರಕರಣಗಳ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಪ್ರಭಾವವನ್ನು ಗಮನಿಸಿದರೆ, ಹೈಕೋರ್ಟ್‌ಗಳು ಜಾರಿಗೆ ತರಲು ಅಸಾಧ್ಯವಾದ ಆದೇಶಗಳನ್ನು ಜಾರಿಗೊಳಿಸುವುದನ್ನು ತಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಸುಮೊಟೋ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಇದರಲ್ಲಿ ನಾಲ್ಕು ತಿಂಗಳೊಳಗೆ ಉತ್ತರ ಪ್ರದೇಶದ ಎಲ್ಲಾ ನರ್ಸಿಂಗ್ ಹೋಮ್ ಹಾಸಿಗೆಗಳು ಆಮ್ಲಜನಕ ಸೌಲಭ್ಯವನ್ನು ಹೊಂದಿರಬೇಕು ಎಂದು ನ್ಯಾಯಾಲಯ ಹೇಳಿತ್ತು. ಪ್ರತಿ ಉತ್ತರಪ್ರದೇಶ ಗ್ರಾಮದಲ್ಲಿ ಐಸಿಯು ಸೌಲಭ್ಯದೊಂದಿಗೆ ಎರಡು ಆಂಬುಲೆನ್ಸ್‌ಗಳು ಇರುವಂತೆ ನೋಡಿಕೊಳ್ಳಬೇಕೆಂದು ಹೈಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತ್ತು.
ಹೈಕೋರ್ಟ್‌ಗಳು ಜಾರಿಗೆ ತರಲು ಸಾಧ್ಯವಿರುವ ಆದೇಶಗಳನ್ನು ನೀಡಬೇಕು" ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಇಂದು ಹೇಳಿದೆ.
ಆದಾಗ್ಯೂ, ಸೋಮವಾರ ಮಾಡಿದ ಹೈಕೋರ್ಟ್‌ನ "ದೇವರೇ ಗತಿ’ ಹೇಳಿಕೆಯನ್ನು ರದ್ದುಗೊಳಿಸಲು ಉನ್ನತ ನ್ಯಾಯಾಲಯ ನಿರಾಕರಿಸಿತು. ಅಂತಹ ಅವಲೋಕನಗಳನ್ನು ಸಲಹೆಯಂತೆ ಪರಿಗಣಿಸುವ ಅಗತ್ಯವಿದೆ ಎಂದು ಹೇಳಿದರು.





