ಮೂಡುಬಿದಿರೆ: ಐಸೋಲೇಶನ್ ಕಿಟ್ ವಿತರಣೆ

ಮಂಗಳೂರು, ಮೇ 21: ಮೂಡಬಿದಿರೆ ಪರಿಸರದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರು ಶುಕ್ರವಾರ 1500 ಐಸೊಲೇಶನ್ ಕಿಟ್ ಅನ್ನು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೊ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನೀಲ್, ರಾಜೇಶ್ ಕಡಲಕೆರೆ, ಸಂತೋಷ್ ಶೆಟ್ಟಿ, ವಾಸುದೇವ್ ನಾಯಕ್, ಪ್ರವೀಣ್ ಶೆಟ್ಟಿ, ಪುರುಷೋತ್ತಮ ನಾಯಕ್, ಜಯ ಕುಮಾರ್, ಸುಚಿನ್ ಮಡಿವಾಳ, ರವಿ ಕುಮಾರ್, ಮುಹಮ್ಮದ್ ಅಸ್ಲಾಮ್, ಅರುಣ್ ಕುಮಾರ್ ಶೆಟ್ಟಿ, ಮುರುಳೀಧರ್, ಸುಕುಮಾರ್ ಜೈನ್, ಕಿರಣ್ ಮಾಸ್ಟರ್ ಉಪಸ್ಥಿತರಿದ್ದರು.
Next Story





