ಕೋವಿಡ್ ಸೋಂಕಿನಿಂದ ಮೃತರ ಅಂತ್ಯಸಂಸ್ಕಾರ

ಉಡುಪಿ, ಮೇ 22: ಕೊರೊನಾ ಸೋಂಕಿನಿಂದ ಮೃತಪಟ್ಟಿರುವರ ಇಬ್ಬರ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ನೇತೃತ್ವದ ತಂಡ ಇಂದು ಗೌರವಯುತವಾಗಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಅವರ ಮಿತ್ರ ಬಳಗದ ಚರಣ್ ರಾಜ್ ಬಂಗೇರ, ಸೌರಭ್ ಬಲ್ಲಾಳ್, ಸಜ್ಜನ್ ಶೆಟ್ಟಿ, ರಿಯಾನ್, ಗಣೇಶ್ ಶೇರಿಗಾರ್, ಯುವರಾಜ್ ಪುತ್ತೂರು, ಜಮೀರ್ ಭಾಗಿಯಾದ್ದರು. ಪ್ಲವರ್ ವಿಷ್ಣು ಉಡುಪಿ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸದಸ್ಯರು, ಸಹಕರಿಸಿದರು. ಕಳೆದ ಮೇ 15ರಂದು, ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಎರಡು ಶವಗಳ ಅಂತ್ಯಸಂಸ್ಕಾರವನ್ನು ನಾಗರಿಕ ಸಮಿತಿ ನಡೆಸಿತ್ತು.
Next Story





