ಶಿವಮೊಗ್ಗ: ಕೋವಿಡ್ ಸೋಂಕಿತ ವ್ಯಕ್ತಿ ಆತ್ಮಹತ್ಯೆ

ಶಿವಮೊಗ್ಗ: ಕೋವಿಡ್ ಸೋಂಕಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಗರ ತಾಲೂಕಿನ ಕಾರ್ಗಲ್ ಬಳಿ ನಡೆದಿದೆ. ಕೋವಿಡ್ ಸೋಂಕಿತ ಲಿಂಗೇಗೌಡ(68) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೆಪಿಸಿ ಮಾಜಿ ಉದ್ಯೋಗಿಯಾಗಿರುವ ಲಿಂಗೇಗೌಡ ಆರೋಗ್ಯ ಸರಿಯಿಲ್ಲದ ಕಾರಣ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದರು. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಶನಿವಾರ ಆಸ್ಪತ್ರೆಗೆ ದಾಖಲಾಗಲು ವೈದ್ಯರು ಸೂಚಿಸಿದ್ದರು.ಆಸ್ಪತ್ರೆಗೆ ದಾಖಲಾಗಲು ಹೆದರಿದ ಲಿಂಗೇಗೌಡ ಅವರು ಕಾರ್ಗಲ್ ನ ಚೈನಾ ಗೇಟ್ ಬಳಿ ಚಾನಲ್ ಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಶಿವಮೊಗ್ಗದ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Next Story





