ಕೋಳಿ ಅಂಗಡಿ: ಅವಧಿ ವಿಸ್ತರಣೆಗೆ ಕೆ.ಪಿ.ಎಫ್.ಬಿ.ಎ ಆಗ್ರಹ
ಮಂಗಳೂರು, ಮೇ 22: ರಾಜ್ಯಾದ್ಯಂತ ಕೋಳಿ ಮಾಂಸದ ಅಂಗಡಿಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ತೆರೆಯಲಯ ಅವಕಾಶ ನೀಡಬೇಕು ಎಂದು ಕರ್ನಾಟಕ ಕುಕ್ಕುಟ ಕೃಷಿಕರ ಬ್ರೀಡರ್‌ಗಳ ಸಂಘ (ಕೆ.ಪಿ.ಎಫ್.ಬಿ.ಎ) ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಕೆ.ಪಿ.ಎಫ್.ಬಿ.ಎ ಪಶು ಸಂಗೋಪನಾ ಮತ್ತು ಪಶುಪಾಲನಾ ಸೇವೆಗಳ ಇಲಾಖೆ ಆಯುಕ್ತರು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪ್ರಸ್ತುತ ಮುಂಜಾನೆ 6ರಿಂದ ಬೆಳಗ್ಗೆ 10ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಈ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗಿರುವ ಪತ್ರದಲ್ಲಿ ಕೆಪಿಎ್ಬಿಎ ಅಧ್ಯಕ್ಷ ಡಾ.ಸುಶಾಂತ್ ರೈ ಬಿ, ಕೋಳಿಯು ಅತಿ ಅಗ್ಗದ ಪ್ರೊಟೀನ್ ಮೂಲವಾಗಿದ್ದು, ಪ್ರತಿರೋಧ ಶಕ್ತಿಯನ್ನು ಉತ್ತೇಜಿಸುವಂತದ್ದೂ ಆಗಿದೆ. ಇದಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪಶು ಸಂಗೋಪನಾ ಮತ್ತು ಪಶುಪಾಲನಾ ಸೇವೆಗಳ ಇಲಾಖೆ ಆಯುಕ್ತರು ಮತ್ತು ಮುಖ್ಯ ಕಾರ್ಯದರ್ಶಿ ಕೆಪಿಎ್ಬಿಎ ಬರೆದಿರುವ ಪತ್ರದಲ್ಲಿ, ಕುಕ್ಕುಟ ಉತ್ಪನ್ನಗಳು ಬೇಗನೆ ಕೆಡುವ ಸ್ವರೂಪದ್ದಾಗಿದ್ದು, ಸಾಂಕ್ರಾಮಿಕ ಕಾಲಘಟ್ಟದಲ್ಲಿ ಸರಕಾರ ಈ ಉದ್ಯಮದ ಚೇತರಿಕೆಗೆ ಸರಕಾರ ನೆರವಾಗಬೇಕು ಎಂದು ಒತ್ತಾಯಿಸಿದೆ.







